ಬೆಂಗಳೂರಿಗೆ ಮೊದಲ ಬಾರಿಗೆ ರೈಲಿನ ಮೂಲಕ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. ಜಮ್ಶೆಡ್ಪುರದಿಂದ 6 ಕಂಟೇನರ್ ಗಳು ಬಂದಿವೆ.
ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಡಿಪೋಗೆ ರೈಲಿನಲ್ಲಿ 6 ಮೆಡಿಕಲ್ ಆಕ್ಸಿಜನ್ ಕಂಟೇನರ್ಗಳು ಬಂದಿದೆ. ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾದ ಡಿಪೋಗೆ ಆಕ್ಸಿಜನ್ ಬಂದಿದ್ದು, ಅನ್ ಲೋಡ್ ಮಾಡಲಾಗ್ತಿದೆ. ಸಮೀಪದ ಆಕ್ಸಿಜನ್ ಪ್ಲಾಂಟ್ ಗಳಿಗೆ ಅಲ್ಲಿಂದ ರಾಜ್ಯದ ವಿವಿಧೆಡೆಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತದೆ ಎನ್ನಲಾಗಿದೆ.
ರೈಲ್ವೆ ಇಲಾಖೆ ಮೊದಲ ಬಾರಿಗೆ ಗ್ರೀನ್ ಕಾರಿಡಾರ್ ನಲ್ಲಿ ಬೆಂಗಳೂರಿಗೆ ಆಕ್ಸಿಜನ್ ಪೂರೈಕೆ ಮಾಡಿದ್ದು, ನಾಳೆ ಮತ್ತೆ 6 ಕಂಟೇನರ್ ಗಳು ಬರಲಿವೆ. ತಲಾ 20 ಟನ್ ಆಕ್ಸಿಜನ್ ಇರುವ 6 ಕಂಟೇನರ್ ಗಳನ್ನು ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ ಡಿಪೋಗೆ ತರಲಾಗಿದೆ. ಆಕ್ಸಿಜನ್ ಕಂಟೇನರ್ ಆಗಮಿಸಿದ ಸಂದರ್ಭದಲ್ಲಿ ಸಂತಸದಿಂದ ಸ್ವಾಗತಿಸಲಾಗಿದೆ. ನಿನ್ನೆ ಬೆಳಗ್ಗೆ ಹೊರಟಿದ್ದ ರೈಲು ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದೆ. 1880 ಕಿಲೋ ಮೀಟರ್ ದೂರವನ್ನು ಕೇವಲ 28 ಗಂಟೆ ಅವಧಿಯಲ್ಲಿ ಕ್ರಮಿಸಲಾಗಿದೆ. ಎಲ್ಲಿಯೂ ನಿಲ್ಲದೇ ಗ್ರೀನ್ ಕಾರಿಡಾರ್ ನಲ್ಲಿ ಜೆಮ್ ಷೆಡ್ ಪುರದಿಂದ ಬೆಂಗಳೂರಿಗೆ ತರಲಾಗಿದೆ ಎಂದು ಹೇಳಲಾಗಿದೆ.