ಸದಾ ಕ್ರಿಕೆಟ್ ಅಭಿಮಾನಿಗಳನ್ನು ಮನರಂಜಿಸುತ್ತಲೇ ಇರುವ ವಿಂಡೀಸ್‌ನ ಕ್ರಿಸ್ ಗೇಲ್ ಮೈದಾನದಲ್ಲಿ ಮಾತ್ರವಲ್ಲೇ ಸಾಮಾಜಿಕ ಜಾಲತಾಣದಲ್ಲೂ ಸಹ ಭಾರೀ ಜನಪ್ರಿಯತೆ ಹೊಂದಿದ್ದಾರೆ.
ಸದ್ಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುವ 41ರ ಹರೆಯದ ಗೇಲ್, ಮಾಲ್ಡೀವ್ಸ್‌ನ ತಾಜ್ ಹೊಟೇಲೊಂದರಲ್ಲಿ ಭಾರೀ ಗಾತ್ರದ ಬರ್ಗರ್ ಒಂದನ್ನು ತಿನ್ನುತ್ತಾ ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 2021ರ ಐಪಿಎಲ್ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟ ಕಾರಣ ತಮ್ಮ ತವರು ಜಮೈಕಾದತ್ತ ಹೊರಟಿರುವ ಗೇಲ್, ಮಾರ್ಗಮಧ್ಯೆ ಮಾಲ್ಡೀವ್ಸ್‌ನಲ್ಲಿ ಕ್ವಾರಂಟೈನ್ ಆಗಿದ್ದಾರೆ.
ಹಸುಗೂಸಿನ ಗಾತ್ರವಿದೆ ಈ ದೈತ್ಯ ಕಪ್ಪೆ….!
“ನನ್ನ ಕೈಯಲ್ಲಿ ಹಿಡಿದ ಅತ್ಯಂತ ದೊಡ್ಡ ಬರ್ಗರ್ ಇದಾಗಿದೆ. ಲಾಬ್ಸ್‌ಟರ್ ಬರ್ಗರ್” ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ವಿಡಿಯೋವೊಂದರಲ್ಲಿ ಗೇಲ್ ಹೇಳಿದ್ದು, ಪೂಲ್‌ಸೈಡ್‌ನಲ್ಲಿ ಕುಳಿತು ಎಂಜಾಯ್ ಮಾಡುತ್ತಿದ್ದಾರೆ.