ಬೆಂಗಳೂರು: ಬೆಡ್ ಬ್ಲಾಕಿಂಗ್ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದ್ದು, ಇನ್ಮುಂದೆ ಕೊರೊನಾ ಸೋಂಕಿತರಿಗೆ ವೈದ್ಯರೇ ಬೆಡ್ ಬುಕ್ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಡ್ ಬ್ಲಾಕಿಂಗ್ ಪ್ರಕರಣಗಳ ಬಗ್ಗೆ ದೂರು ಬರುತ್ತಿವೆ. ಹಾಗಾಗಿ ಇನ್ಮುಂದೆ ವೈದ್ಯರೇ ಬೆಡ್ ಬುಕ್ ಮಾಡಲಿದ್ದಾರೆ. ಸೋಂಕಿತರು ಯಾರೂ ಕೂಡ ನೇರವಾಗಿ ಆಸ್ಪತ್ರೆಗೆ ದಾಖಲಾಗುವಂತಿಲ್ಲ. ಕೋವಿಡ್ ಕೇರ್ ಸೆಂಟರ್ ಗಳಿಗೆ ತೆರಳಿ ಅಲ್ಲಿರುವ ವೈದ್ಯರು ಆಕ್ಸಿಜನ್ ಲೆವಲ್ ಪರಿಶೀಲಿಸಿ ಸೂಚನೆ ನೀಡಿದ ಬಳಿಕವೇ ಆಸ್ಪತ್ರೆಗೆ ದಾಖಲಾಗಬೇಕು ಎಂದರು.
ಕೋವಿಡ್ ಕೇರ್ ಸೆಂಟರ್ ಗಳ ವೈದ್ಯರು, ಸೋಂಕಿತರ ಆಕ್ಸಿಜನ್ ಲೆವಲ್ ಮೇಲೆ ಸೋಂಕಿತರನ್ನು ವೆಂಟಿಲೇಟರ್ ಗೆ ಕಳುಹಿಸಬೇಕೋ ಅಥವಾ ಆಕ್ಸಿಜನ್ ಬೆಡ್ ಗೆ ಕಳುಹಿಸಬೇಕೋ ಎಂಬುದನ್ನು ನಿರ್ಧರಿಸುತ್ತಾರೆ ಎಂದು ಹೇಳಿದರು. ಇದೇ ವೇಳೆ ಪ್ರತಿ ತಾಲೂಕು ಕೇಂದ್ರಗಳಲ್ಲಿ 100 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ತೆರೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.