ಫೋಟೋಗಳನ್ನು ಸಂಗ್ರಹಿಸಿಡಲು ನೀವು ಗೂಗಲ್ ಫೋಟೋ ಬಳಸುತ್ತಿದ್ದರೆ ನಿಮಗೊಂದು ಶಾಕಿಂಗ್ ನ್ಯೂಸ್ ಇದೆ. ಜೂನ್ ಒಂದರ ನಂತ್ರ ಗೂಗಲ್ ಫೋಟೋ ಸೇವೆ ಉಚಿತವಲ್ಲ. ಮುಂದಿನ ತಿಂಗಳಿನಿಂದ ಈ ಸೇವೆಯನ್ನು ಬಳಸಲು ಹಣ ಪಾವತಿಸಬೇಕು. ಈವರೆಗೆ ಬಳಕೆದಾರರು ಅನಿಯಮಿತ ಫೋಟೋಗಳನ್ನು ಗೂಗಲ್ ಫೋಟೋಗಳಲ್ಲಿ ಸೇವ್ ಮಾಡಬಹುದಿತ್ತು. ಇದಕ್ಕೆ ಯಾವುದೇ ಶುಲ್ಕವನ್ನು ವಿಧಿಸಬೇಕಾಗಿರಲಿಲ್ಲ.
ಜೂನ್ ತಿಂಗಳವರೆಗೆ 15 ಜಿಬಿ ಫೋಟೋ ಸಂಗ್ರಹಿಸಲು ಯಾವುದೇ ಶುಲ್ಕ ಪಾವತಿಸುವುದಿಲ್ಲವೆಂದು ಗೂಗಲ್ ಹೇಳಿತ್ತು. ಮುಂದಿನ ತಿಂಗಳಿನಿಂದ ಜನರಿಗೆ 15 ಜಿಬಿಗಿಂತ ಹೆಚ್ಚು ಫೋಟೋ ಸಂಗ್ರಹಿಸಲು 1.99 ಡಾಲರ್ ನೀಡಬೇಕು. ಕಂಪನಿ ಇದಕ್ಕೆ ಗೂಗಲ್ ಒನ್ ಎಂದು ಹೆಸರಿಟ್ಟಿದೆ. ಇದ್ರ ಚಂದಾದಾರಿಕೆ ಶುಲ್ಕ 19.99 ಡಾಲರ್. ಹೊಸ ಫೋಟೋ ಸೇವ್ ಮಾಡಲು ಮಾತ್ರ ಬಳಕೆದಾರರು ಹಣ ಪಾವತಿಸಬೇಕು. ಈಗಾಗಲೇ ಗೂಗಲ್ ಫೋಟೋದಲ್ಲಿರುವ ಫೋಟೋ ಸುರಕ್ಷಿತವಾಗಿರಲಿದೆ.
ಇದೇ ವೇಳೆ ಮೀಟಿಂಗ್ ಗೆ ಬಳಸುತ್ತಿರುವ ಗೂಗಲ್ ಮೀಟ್ ವಿಡಿಯೋ ಕರೆ ಸೇವೆ ಈ ವರ್ಷ ಜೂನ್ ವರೆಗೆ ಉಚಿತವಾಗಿರಲಿದೆ. ಇದಕ್ಕೆ ಯಾವುದೇ ಹಣ ಖರ್ಚು ಮಾಡಬೇಕಾಗಿಲ್ಲ. ಈ ಬಗ್ಗೆ ಗೂಗಲ್ ಟ್ವೀಟ್ ಮಾಡಿದೆ.