ಭಾರತೀಯ ಪೌರರಾಗಿ ನಿಮ್ಮ ಬಹುತೇಕ ಅಧಿಕೃತ ಕೆಲಸಗಳಿಗೆ ಆಧಾರ್ ಕಾರ್ಡ್ ಬಲವಾದ ಆಧಾರವಾಗಿದೆ. ನಿಮ್ಮೊಂದಿಗೆ ಇರಲೇಬೇಕಾದ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಸಹ ಒಂದು. ಆದರೆ ಇಲ್ಲಿವರೆಗೂ ವಿತರಣೆ ಮಾಡಲಾಗುತ್ತಿದ್ದ ಆಧಾರ್ ಕಾರ್ಡ್ಗಳ ಗಾತ್ರ ದೊಡ್ಡದಾದ ಕಾರಣ ಅವುಗಳನ್ನು ನಮ್ಮ ಜೇಬುಗಳು ಅಥವಾ ವ್ಯಾಲೆಟ್ನಲ್ಲಿ ಇಟ್ಟುಕೊಳ್ಳುವುದು ಕಷ್ಟವಾಗುತ್ತಿತ್ತು.
ಈ ನಿಟ್ಟಿನಲ್ಲಿ ಮಹತ್ವದ ಬದಲಾವಣೆ ತಂದಿರುವ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಹೊಸ ಆಧಾರ್ ಕಾರ್ಡ್ಗಳನ್ನು ಪರಿಚಯಿಸಿದ್ದು, ಈ ಕಾರ್ಡ್ ಇನ್ನಷ್ಟು ಸಣ್ಣದಾಗಿ, ಚೊಕ್ಕವಾಗಿಯೂ ಇದೆ. ಹೊಸ ಆಧಾರ್ ಕಾರ್ಡ್ಗಳನ್ನು ಪಿವಿಸಿ ಕಾರ್ಡ್ ಬಳಸಿಕೊಂಡು ಸಿದ್ಧಪಡಿಸಲಾಗುತ್ತಿದೆ.
ನಿಮ್ಮ ಎಟಿಎಂ ಕಾರ್ಡ್ಗಳಂತೆ ಕಾಣುವ ಈ ಕಾರ್ಡ್ಗಳನ್ನು ನಿಮ್ಮ ವ್ಯಾಲೆಟ್ನಲ್ಲಿ ಇಟ್ಟುಕೊಂಡು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾಗಿದೆ. ಈ ಹೊಸ ಆಧಾರ್ ಕಾರ್ಡ್ನಲ್ಲಿ ಹೋಲೋಗ್ರಾಂ ಮೈಕ್ರೋ ಬರವಣಿಗೆಗಳೆಲ್ಲಾ ಇದ್ದು ನೀರಿನಿಂದ ಹಾನಿಯಾಗದಂತೆ ವಿನ್ಯಾಸಗೊಳಿಸಲಾಗಿದೆ. ಈ ಕಾರ್ಡ್ಗಳನ್ನು ನೀವು ಆಫ್ಲೈನ್ ಮುಖಾಂತರವೂ ಸಹ ಸುಲಭವಾಗಿ ಪರಿಶೀಲನೆ ಮಾಡಬಹುದಾಗಿದೆ.
ಮತ್ತೆ ಒಂದು ವಾರ ಲಾಕ್ ಡೌನ್ ವಿಸ್ತರಣೆ: ದೆಹಲಿ ಸಿಎಂ ಕೇಜ್ರಿವಾಲ್ ಘೋಷಣೆ
ಈ ಹೊಸ ವಿನ್ಯಾಸದ ಕಾರ್ಡ್ ನಿಮಗೆ ಬೇಕಾದಲ್ಲಿ: https://uidai.gov.in/ ಜಾಲತಾಣಕ್ಕೆ ಭೇಟಿ ಕೊಟ್ಟು, ಅಲ್ಲಿ ಪಿವಿಸಿ ಆಧಾರ್ ಕಾರ್ಡ್ಗೆ ಆರ್ಡರ್ ಮುಂದಿಡಬೇಕು. ನಂತರ ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ ಅಥವಾ 16 ಅಂಕಿಯ ವರ್ಚುವಲ್ ಐಡಿ ಅಥವಾ 28 ಅಂಕಿಯ ಇಐಡಿಯನ್ನು ಕೊಡಮಾಡಬಹುದಾಗಿದೆ.
ಇದಾದ ಬಳಿಕ ನಿಮ್ಮ ವಿವರಗಳನ್ನು ಒಟಿಪಿ ಮೂಲಕ ಖಾತ್ರಿ ಪಡಿಸಿ. ಇದಾದ ಬಳಿಕ ನಿಮ್ಮ ಪಿವಿಸಿ ಆಧಾರ್ ಕಾರ್ಡ್ಅನ್ನು ಒಮ್ಮೆ ಪ್ರೀವ್ಯೂ ನೋಡಬಹುದಾಗಿದೆ.
ನಂತರ 50 ರೂಪಾಯಿ ಪಾವತಿ ಮಾಡಿ ನಿಮ್ಮ ಆರ್ಡರ್ ಪೂರ್ತಿ ಮಾಡಬಹುದಾಗಿದೆ.