ಭಾರತದಲ್ಲಿ ಈ ವರ್ಷ 28,000 ಫ್ರೆಷರ್ ಗಳನ್ನು ನೇಮಕಾತಿ ಮಾಡಿಕೊಳ್ಳಲು ಐಟಿ ಸೇವೆಗಳ ಪ್ರಮುಖ ಕಂಪನಿ ಕಾಗ್ನಿಜೆಂಟ್ ಮುಂದಾಗಿದೆ. ಕಾಗ್ನಿಜೆಂಟ್ ಸಿಇಒ ಬ್ರಿಯಾನ್ ಹಂಫ್ರೆಸ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಐಟಿ ಸೇವೆಗಳ ಪ್ರಮುಖ ಕಂಪನಿಯಾಗಿರುವ ಕಾಗ್ನಿಜೆಂಟ್ 2021 ರಲ್ಲಿ 28,000 ಫ್ರೆಷರ್ ಗಳನ್ನು ನೇಮಿಸಿಕೊಳ್ಳಲಿದೆ. 2020 ರಲ್ಲಿ 17,000 ಫ್ರೆಷರ್ ಗಳನ್ನು ನೇಮಿಸಿಕೊಳ್ಳಲಾಗಿದೆ. ಕಾಗ್ನಿಜೆಂಟ್ ನಲ್ಲಿ 2,96,500 ಉದ್ಯೋಗಿಗಳಿದ್ದು, ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಭಾರತದಲ್ಲಿ ನೆಲೆಸಿದ್ದಾರೆ.
ಭಾರತದಲ್ಲಿ ಎರಡು ತಿಂಗಳ ನೋಟಿಸ್ ಅವಧಿ ಇರುವುದರಿಂದ ಕೆಲವು ತಿಂಗಳಲ್ಲಿ ರಾಜೀನಾಮೆ ಆಧಾರದ ಮೇಲೆ ಕಂಪನಿ ಫ್ರೆಷರ್ ಗಳ ನೇಮಕಾತಿಗೆ ಕ್ರಮ ಕೈಗೊಂಡಿದೆ. ಹೆಚ್ಚುವರಿ ನೇಮಕಾತಿಯನ್ನು ದಾಖಲೆಯ ವೇಗದಲ್ಲಿ ನೇಮಿಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.