ಕೋವಿಡ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧಾರಣೆ ಕಡ್ಡಾಯವಾದ ಕಾರಣ ಜನರು ಬಲೇ ಕಷ್ಟಪಟ್ಟು ಮಾಸ್ಕ್ಗಳನ್ನು ಧರಿಸುತ್ತಿದ್ದಾರೆ. ಇದೇ ವೇಳೆ ಬಹಳಷ್ಟು ಮದುವಣಗಿತ್ತಿಯರು ತಮ್ಮ ಧಿರಿಸಿಗೆ ಮ್ಯಾಚ್ ಆಗುವಂಥ ಮಾಸ್ಕ್ಗಳನ್ನು ಧರಿಸುವ ಮೂಲಕ ಸೋಂಕಿನ ವಿರುದ್ಧ ರಕ್ಷಣೆಗೊಂದು ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.
ಮಹಿಳೆಯೊಬ್ಬರು ತಮ್ಮೆಲ್ಲಾ ಒಡವೆಗಳನ್ನು ಧರಿಸಿಕೊಂಡು ಮದುವೆ ಸಮಾರಂಭವೊಂದಕ್ಕೆ ಆಗಮಿಸಿರುವ ಚಿತ್ರವೊಂದು ವೈರಲ್ ಆಗಿದೆ. ಇಷ್ಟೇ ಆಗಿದ್ದರೆ ಈ ಚಿತ್ರ ಜನರ ಗಮನ ಸೆಳೆಯುತ್ತಿರಲಿಲ್ಲ. ತಮ್ಮ ಮುಖದ ಮೇಲಿನ ಮಾಸ್ಕ್ ಮೇಲೆಯೇ ಮೂಗುತಿ ಧರಿಸಿರುವ ಈಕೆಯ ಐಡಿಯಾ ನೆಟ್ಟಿಗರ ಮನಗೆದ್ದಿದೆ.
ದೇಶಾದ್ಯಂತ ‘ಜೀವದ್ರವ್ಯ’ ವಿತರಣೆಗೆ ಸುಪ್ರೀಂಕೋರ್ಟ್ ಮಹತ್ವದ ಕ್ರಮ: ಡಾ. ದೇವಿಶೆಟ್ಟಿ ಒಳಗೊಂಡ ಆಮ್ಲಜನಕ ಟಾಸ್ಕ್ ಫೋರ್ಸ್ ರಚನೆ
ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಘೋಡಾಕಲ್ ನಿವಾಸಿಯಾದ ಕವಿತಾ ಜೋಶಿ ಈ ಟ್ವಿಸ್ಟ್ನ ಸಂಶೋಧಕರಾಗಿದ್ದಾರೆ. ತಮ್ಮ ಸಹೋದರ ಸಂಬಂಧಿ ಮಿತಿಕಾಳ ಮದುವೆಯ ಸಮಾರಂಭದ ವೇಳೆ ಅವರು ಈ ರೀತಿ ಭಾರೀ ಮೂಗುತಿಯಲ್ಲಿ ಕಂಗೊಳಿಸಿದ್ದಾರೆ.