ಕೋವಿಡ್ ಸಾಂಕ್ರಮಿಕದ ಎರಡನೇ ಅಲೆ ದೇಶಾದ್ಯಂತ ತಲ್ಲಣವೆಬ್ಬಿಸುತ್ತಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ಡೌನ್‌ನಂಥ ಕ್ರಮಗಳ ಮೂಲಕ ಈ ಪಿಡುಗನ್ನು ತಡೆಗಟ್ಟಲು ಶಕ್ತಿ ಮೀರಿ ಪ್ರಯತ್ನಿಸುತ್ತಿವೆ. ತುರ್ತು ಎಲ್ಲಾದರೂ ಹೋಗಬೇಕಾದಲ್ಲಿ ಜನರು ವಿಶೇಷವಾದ ಪಾಸ್‌ಗಳನ್ನು ಪಡೆದುಕೊಳ್ಳಬೇಕಾಗುತ್ತದೆ.
ಪಿಂಪಲ್‌ಗಳಿಗೆ ಚಿಕಿತ್ಸೆ ಪಡೆಯಲೆಂದು ತೆಗೆದುಕೊಂಡ ಇ-ಪಾಸ್ ಒಂದರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಹಾರದ ಪೂರ್ನಿಯಾ ಜಿಲ್ಲೆಯ ಮ್ಯಾಜಿಸ್ಟ್ರೇಟ್ ರಾಹುಲ್ ಕುಮಾರ್ ಈ ಚಿತ್ರವನ್ನು ಶೇರ್ ಮಾಡಿಕೊಂಡಿದ್ದಾರೆ.
ಕೊರೋನಾ ತಡೆಗೆ ಮತ್ತೊಂದು ಮಹತ್ವದ ಕ್ರಮ: ಕೋವಿಡ್ ಪರೀಕ್ಷೆಗೆ ವೇಗ, ರಿಸಲ್ಟ್ ತಡವಾದ್ರೆ ಲ್ಯಾಬ್‌ಗಳಿಗೆ ದಂಡ
“ಲಾಕ್‌ಡೌನ್ ವೇಳೆ ನಾವು ಸ್ವೀಕರಿಸುವ ಅರ್ಜಿಗಳ ಪೈಕಿ ಗರಿಷ್ಠ ಮಟ್ಟದಲ್ಲಿ ವಿಶ್ವಾಸಾರ್ಹ ಕಾರಣಗಳು ಇರುತ್ತವೆ. ಆದರೆ ಒಮ್ಮೊಮ್ಮೆ ಇಂಥ ಮನವಿಗಳನ್ನೂ ಸಹ ಸ್ವೀಕರಿಸುತ್ತೇವೆ. ಸಹೋದರ, ನಿಮ್ಮ ಪಿಂಪಲ್ ಚಿಕಿತ್ಸೆಗೆ ಕಾಯಬಹುದು” ಎಂದು ಕುಮಾರ್ ಅರ್ಜಿಯ ಚಿತ್ರವನ್ನು ಶೇರ್ ಮಾಡಿಕೊಂಡು ಟ್ವೀಟ್ ಮಾಡಿದ್ದಾರೆ.