ಕೊರೊನಾ ಎರಡನೇ ಅಲೆ ದೇಶದ ಜನತೆಯನ್ನು ಕಂಗೆಡಿಸಿದೆ. ಅದರಲ್ಲೂ ಕೊರೊನಾ ಎರಡನೇ ಅಲೆಯಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಬಾರಿಯ ಕೊರೊನಾ ಯುವ ಜನತೆಯನ್ನು ಹೆಚ್ಚು ಕಾಡುತ್ತಿದೆ. ಕಳೆದ ಬಾರಿ ವೃದ್ದರನ್ನೇ ಟಾರ್ಗೆಟ್ ಆಗಿಸಿಕೊಂಡಿದ್ದ ಕೊರೊನಾ ಹಲವರ ಪ್ರಾಣ ಬಲಿ ಪಡೆದಿತ್ತು. ಕೊರೊನಾ ಎರಡನೇ ಅಲೆಯಲ್ಲಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವುದು ಗಾಬರಿ ಮೂಡಿಸಿದೆ.
ಹಾಗೆಂದು ಕೊರೊನಾ ಎರಡನೇ ಅಲೆ ವೃದ್ದರನ್ನು ಕಾಡುತ್ತಿಲ್ಲವೆಂದಲ್ಲ. ಆದರೆ ವೃದ್ದರಲ್ಲಿ ಕೊರೊನಾದ ಹೊಸ ಲಕ್ಷಣ ಅಧ್ಯಯನವೊಂದರಲ್ಲಿ ಬಹಿರಂಗವಾಗಿದ್ದು, ಬೆಚ್ಚಿಬೀಳಿಸುವಂತಿದೆ.
ಈ ಬಾರಿ ವೃದ್ದರಿಗೆ ಕೊರೊನಾ ಸೋಂಕು ತಗುಲಿದ ವೇಳೆ ಹಲವರಲ್ಲಿ ಜ್ವರ ಹೊರತುಪಡಿಸಿ ಇತರೆ ರೋಗ ಲಕ್ಷಣಗಳಾದ ಸುಸ್ತು, ಕೆಮ್ಮು, ನೆಗಡಿ, ವಾಸನೆ ಹೋಗುವುದು ಮೊದಲಾದವು ಕಂಡು ಬಂದಿದೆ.
ಆದರೆ ಈ ರೋಗ ಲಕ್ಷಣಗಳು ಕಂಡು ಬಂದ ವೇಳೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ಜ್ವರ ಹೊರತುಪಡಿಸಿದ ಇತರೆ ರೋಗ ಲಕ್ಷಣಗಳು ವೃದ್ದರಲ್ಲಿ ಕಂಡು ಬಂದ ವೇಳೆ ಆಕ್ಸಿಮೀಟರ್ ನಲ್ಲಿ ಆಕ್ಸಿಜನ್ ಮಟ್ಟವನ್ನು ಪರೀಕ್ಷಿಸುತ್ತಿರಿ. ಈ ವೇಳೆ ಕೈ ಒಣಗಿರಬೇಕು ಎಂದು ತಿಳಿಸಿದ್ದಾರೆ.
ಒಂದು ವೇಳೆ ಆಕ್ಸಿಜನ್ ಮಟ್ಟ ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾದಲ್ಲಿ ಕೂಡಲೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎಂದು ತಿಳಿಸಿದ್ದಾರೆ.