ನಾನ್ ವೆಜ್ ಪ್ರಿಯರಿಗೆ ಚೈನಿಸ್ ಅಡುಗೆ ಇಷ್ಟ. ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಮತ್ತು ಬಾಯಿ ಚಪ್ಪರಿಸಿ ತಿನ್ನುವ ಚೈನಿಸ್ ಫ್ರೈಡ್ ಪ್ರಾನ್ಸ್ ಕುರಿತ ಮಾಹಿತಿ ಇಲ್ಲಿದೆ. ನೀವೂ ಒಮ್ಮೆ ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು :
ಪ್ರಾನ್ಸ್- 2 ಕಪ್, ಹಾಲು- ಅರ್ಧ ಕಪ್, ಈರುಳ್ಳಿ- 1 (ರಿಂಗಿನಂತೆ ಕತ್ತರಿಸಿಕೊಳ್ಳಿ), ಬೇಕಿಂಗ್ ಸೋಡಾ- 1/4 ಟೀ ಸ್ಪೂನ್, ಮೊಟ್ಟೆ- 2, ಸೋಯಾ ಸಾಸ್- 1 ಟೇಬಲ್ ಸ್ಪೂನ್, ಹಿಟ್ಟು- 1 ಕಪ್, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕರಿಯಲು ಬೇಕಾದಷ್ಟು ಎಣ್ಣೆ.
‘5 ಸ್ಟಾರ್ ಹೋಟೆಲ್ನಲ್ಲಿ ಕುಳಿತು ರೈತರನ್ನು ದೂಷಿಸುವವರು ಪಟಾಕಿ ಮರೆಯುತ್ತಾರೆ’ : ಸುಪ್ರೀಂ ಕೋರ್ಟ್ ತರಾಟೆ
ತಯಾರಿಸುವ ವಿಧಾನ :
ಮೊದಲಿಗೆ ಒಂದು ಪಾತ್ರೆಯಲ್ಲಿ ಹಿಟ್ಟನ್ನು ಹಾಕಿ. ಅದರೊಂದಿಗೆ ಬೇಕಿಂಗ್ ಸೋಡಾ ಹಾಕಿ ಕಲೆಸಿರಿ. ಅದಕ್ಕೆ ಚೆನ್ನಾಗಿ ಮಿಕ್ಸ್ ಮಾಡಿದ ಮೊಟ್ಟೆಯನ್ನು ಹಾಕಿ, ಸೋಯಾ ಸಾಸ್, ಪ್ರಾನ್ಸ್, ಉಪ್ಪು ಹಾಕಿ ಚೆನ್ನಾಗಿ ಕಲೆಸಿಕೊಳ್ಳಿ. ನಂತರ ಹಾಲು ಹಾಕಿ ಕಲೆಸಿರಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ಬಳಿಕ, ಅದಕ್ಕೆ ರೆಡಿ ಮಾಡಿಕೊಂಡ ಪ್ರಾನ್ಸ್ ಮಿಶ್ರಣವನ್ನು ಚಮಚದಲ್ಲಿ ಹಾಕಿ ಸಣ್ಣ ಉರಿಯಲ್ಲಿ ಕರಿಯಿರಿ. ಕೆಂಪಗೆ ಕಾಯುವವರೆಗೂ ಕರಿದು ತಟ್ಟೆಯಲ್ಲಿಡಿ. ಅದರ ಮೇಲೆ ಈರುಳ್ಳಿ ಹಾಕಿಕೊಂಡು ಟೇಸ್ಟ್ ನೋಡಿ.