ದೇಶದ ಹೆಸರು, ಕರೆನ್ಸಿ ಬಗ್ಗೆ ಕೇಳಿದ್ರೆ ನಾಲ್ಕರಿಂದ ಐದು ದೇಶದ ಹೆಸರು, ಕರೆನ್ಸಿ ಹೇಳೋದು ಕಷ್ಟ. ಆದ್ರೆ 10 ವರ್ಷದ ಹುಡುಗಿ ನೆನಪಿನ ಶಕ್ತಿಗೆ ಭೇಷ್ ಎನ್ನಲೇಬೇಕು. ವಿಶ್ವದ 196 ದೇಶಗಳ ಅಧಿಕೃತ ಹೆಸರುಗಳೊಂದಿಗೆ ಆ ದೇಶಗಳ ಕರೆನ್ಸಿಯನ್ನು ಸಾರಾ ಚಿಪಾ ಹೇಳ್ತಾಳೆ. ರಾಜಸ್ಥಾನದ ಸಾರಾ ತನ್ನ ಕುಟುಂಬದೊಂದಿಗೆ ದುಬೈನಲ್ಲಿ ವಾಸವಾಗಿದ್ದಾಳೆ.
ಫೇಸ್‌ಬುಕ್, ಯೂಟ್ಯೂಬ್ ಮತ್ತು ಲಿಂಕ್ಡ್ ಇನ್‌ಗಳಲ್ಲಿ ಸ್ಪರ್ಧೆ ನಡೆಸಲಾಗಿತ್ತು. ಒಎಂಇಜಿ ಸಂಸ್ಥೆ ನಿಗದಿತ ಸಮಯದಲ್ಲಿ ಸ್ಪರ್ಧೆಯನ್ನು ಆಯೋಜಿಸಿತ್ತು. ಸಾರಾ ನಿರ್ದಿಷ್ಟ ಸಮಯದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಯಶಸ್ವಿಯಾದಳು. ಕರೆನ್ಸಿ ಹೆಸರನ್ನು ಹೇಳುವ ವಿಭಾಗದಲ್ಲಿ ಸಾರಾ ವಿಶ್ವದಾಖಲೆ ಮಾಡಿದ್ದಾಳೆ.
ಮೂರು ವರ್ಷಗಳ ಹಿಂದೆ ಬ್ರೈನ್ ರೈಮ್ ಕಾಗ್ನಿಟಿವ್ ಸೊಲ್ಯೂಷನ್ಸ್ ಸಂಸ್ಥಾಪಕ ಸುಶಾಂತ್ ಮೈಸೋರ್ಕರ್ ಭೇಟಿಯಾಗಿದ್ದ ಸಾರಾ, ಅವರಿಂದ ತರಬೇತಿ ಪಡೆದಿದ್ದಾಳೆ. ವಿವಿಧ ಕಂಠಪಾಠ ತಂತ್ರದೊಂದಿಗೆ ಸಾರಾಗೆ ತರಬೇತಿ ನೀಡಲಾಗಿದೆ. ಆರಂಭದಲ್ಲಿ ಎಲ್ಲವನ್ನು ನೆನಪಿಟ್ಟುಕೊಳ್ಳುವುದು ಸಾರಾಗೆ ಕಷ್ಟವಾಗಿತ್ತು. ಆರಂಭದಲ್ಲಿ ಒಂದುವರೆ ಗಂಟೆ ತೆಗೆದುಕೊಳ್ತಿದ್ದ ಸಾರಾ ನಂತ್ರ 15 ನಿಮಿಷಗಳಲ್ಲಿ ಎಲ್ಲವನ್ನು ಹೇಳುತ್ತಿದ್ದಾಳೆ. ಉತ್ತಮ ಡಾನ್ಸರ್ ಆಗಿರುವ ಸಾರಾ, ಯುಟ್ಯೂಬ್ ನಲ್ಲಿ ಇನ್‌ಕ್ರೆಡಿಬಲ್ ಇಂಡಿಯಾ ಎಂಬ ಸರಣಿಯಲ್ಲಿ ಕಾಣಿಸಿಕೊಳ್ತಿದ್ದಾಳೆ.