ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ‘ಆರ್ಯ’ ಚಿತ್ರವನ್ನು 2004 ಮೇ 7ರಂದು ಬಿಡುಗಡೆ ಮಾಡಲಾಗಿತ್ತು. ಈ ಸಿನಿಮಾ ತೆರೆಮೇಲೆ ಬಂದು ಇಂದಿಗೆ 17 ವರ್ಷಗಳಾಗಿವೆ. ಅಲ್ಲು ಅರ್ಜುನ್ ನಾಯಕನಾಗಿ ನಟಿಸಿದ ಎರಡನೇ ಚಿತ್ರ ಇದಾಗಿದ್ದು ಈ ಸಿನಿಮಾ ಬಳಿಕ ಅಲ್ಲು ಅರ್ಜುನ್ ಟಾಲಿವುಡ್ ನ ಸ್ಟಾರ್ ನಟರಾದರು.
ಈ ಸಂತಸವನ್ನು ಅಲ್ಲು ಅರ್ಜುನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಈ ಚಿತ್ರವು ಹಲವರ ಜೀವನವನ್ನು ಬದಲಾಯಿಸಿತು. ನನ್ನನ್ನು ಒಬ್ಬ ನಟನಾಗಿ ಗುರುತಿಸುವಂತೆ ಮಾಡಿತು. ಸುಕುಮಾರ್ ಅವರು ಅತ್ಯುತ್ತಮ ನಿರ್ದೇಶಕರಾದರು. ಇನ್ನು ದಿಲ್ ರಾಜು ಒಬ್ಬ ನಿರ್ಮಾಪಕರಾಗಿ ಹೆಸರು ಗಳಿಸಿದರು. ನಮ್ಮ ಜೀವನದಲ್ಲಿ ಇದು ದೊಡ್ಡ ಮೈಲಿಗಲ್ಲು ಎಂದು ಬರೆದುಕೊಂಡಿದ್ದಾರೆ.
ಈ ಚಿತ್ರದಲ್ಲಿ ಅಲ್ಲು ಅರ್ಜುನ್, ಅನೂಪ್ ಮೆಹ್ತಾ, ಶಿವ ಬಾಲಾಜಿ, ಸುಬ್ಬರಾಜು, ವೇಣು ಮಾಧವ್, ರಾಜನ್ ಪಿ ದೇವ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದರು.
https://www.instagram.com/p/COj2CWhhrDQ/?utm_source=ig_web_copy_link