ದೆಹಲಿಯ ಐಐಟಿಯ ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ಬಂದು ಕಾಲೇಜಿನ ಐಸೋಲೇಷನ್ ಸೆಂಟರ್ನಲ್ಲಿರುವ ವಿದ್ಯಾರ್ಥಿಗಳು ವಿಡಿಯೋ ಸಂದೇಶವೊಂದನ್ನ ಶೇರ್ ಮಾಡಿದ್ದು ಕೋವಿಡ್ನ್ನು ಹೇಗೆ ಧೈರ್ಯವಾಗಿ ಎದುರಿಸಬೇಕು ಅನ್ನೋದನ್ನ ತಿಳಿಸಿದ್ದಾರೆ.
ದೆಹಲಿಯ ಐಐಟಿ ಐಸೋಲೇಷನ್ ಕೇಂದ್ರದಲ್ಲಿ ಯಾವ ರೀತಿಯ ಸೌಲಭ್ಯಗಳನ್ನ ನೀಡಲಾಗಿದೆ ಅನ್ನೋದನ್ನ ವಿವರಿಸಿದ್ದಾರೆ.
ಪ್ರಸ್ತುತ ಇಲ್ಲಿ ಐವರು ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲ ಕೊರೊನಾ ಸೋಂಕಿತರೇ ಆಗಿದ್ದು ಕ್ರಮೇಣವಾಗಿ ಇವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರ್ತಿದೆ ಎಂದು ವಿದ್ಯಾರ್ಥಿ ವಿಡಿಯೋದಲ್ಲಿ ವಿವರಿಸಿದ್ದಾರೆ.
ಹೋಮಿಯೋಪತಿ ಮಾತ್ರೆ ಸೇವಿಸಿ ಒಂದೇ ಕುಟುಂಬದ 8 ಕೊರೊನಾ ರೋಗಿಗಳ ಸಾವು
ಐಐಟಿಯ ಪಿಹೆಚ್ಡಿ ವಿದ್ಯಾರ್ಥಿಯಾಗಿರುವ ರಾಹುಲ್ ಜೈಸ್ವಾಲ್ ಐಸೋಲೇಷನ್ ಕೇಂದ್ರದಲ್ಲಿ ತಮ್ಮ ಅನುಭವ ಹೇಗಿತ್ತು ಅನ್ನೋದನ್ನ ವಿವರಿಸಿದ್ದಾರೆ. ಕೊರೊನಾ ಲಕ್ಷಣಗಳನ್ನ ಕಂಡ ಬಳಿಕ ನಾನು ಐಟಿಟಿ ದೆಹಲಿ ಆಸ್ಪತ್ರೆಗೆ ಹೋದೆ. ಅಲ್ಲಿ ವೈದ್ಯರು ನನಗೆ ಆರ್ಟಿ – ಪಿಸಿಆರ್ ಟೆಸ್ಟ್ ನಡೆಸಿದ್ರು. ವೈದ್ಯರ ಸಲಹೆಯಂತೆ ನಾನು ಗುಲ್ಮೊಹರ್ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಆಗಿದ್ದೆ. 2 ದಿನದಲ್ಲಿ ನನ್ನ ಕೋವಿಡ್ ವರದಿ ಬಂದಿದ್ದು ನಾನು ಐಸೋಲೇಷನ್ ಕೇಂದ್ರಕ್ಕೆ ಶಿಫ್ಟ್ ಆದೆ ಎಂದು ಜೈಸ್ವಾಲ್ ಹೇಳಿದ್ರು.
ಇನ್ನೊಂದು ವಿಡಿಯೋದಲ್ಲಿ ವೆಂಕಟೇಶ್ ಎಂಬವರು ಕ್ವಾರಂಟೈನ್ ಸೌಲಭ್ಯವನ್ನ ವಿವರಿಸಿದ್ದಾರೆ. ಹಾಲಿನ ಪುಡಿ, ಟೀ ಬ್ಯಾಗ್, ಎಲೆಕ್ಟ್ರಿಕ್ ಕೆಟಲ್, ಸಕ್ಕರೆ, ಹಬೆ ತೆಗೆದುಕೊಳ್ಳುವ ವ್ಯವಸ್ಥೆ ಹೀಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನ ಇಲ್ಲಿ ಒದಗಿಸಲಾಗಿದೆ. ಅಲ್ಲದೇ ಕಿಟಕಿ ಮೂಲಕ ವಿದ್ಯಾರ್ಥಿಗಳಿಗೆ ಆಹಾರವನ್ನ ನೀಡುವ ವ್ಯವಸ್ಥೆಯನ್ನೂ ಮಾಡಿದ್ದಾರೆ ಎಂದು ವೆಂಕಟೇಶ್ ಹೇಳಿದ್ರು.