ನವದೆಹಲಿ: ಕೊರೋನಾ ಲಸಿಕೆಯ ಬೌದ್ಧಿಕ ಆಸ್ತಿ ರಕ್ಷಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಬೌದ್ಧಿಕ ಆಸ್ತಿ ಹಕ್ಕಿನ ರಕ್ಷಣೆಯಿಂದ ತಾತ್ಕಾಲಿಕ ವಿನಾಯಿತಿ ನೀಡಬೇಕೆಂದು ಭಾರತ ಮನವಿ ಮಾಡಿದೆ.
ಭಾರತದ ಬೇಡಿಕೆಗೆ ಅಮೆರಿಕ ಒಪ್ಪಿಗೆ ನೀಡಿದೆ. ಇದರ ಬಗ್ಗೆ ವಿಶ್ವ ವ್ಯಾಪಾರ ಸಂಘಟನೆಯ ಸಭೆಯಲ್ಲಿ ಚರ್ಚೆ ನಡೆಸಲಾಗುವುದು.
ವಿಶ್ವ ವ್ಯಾಪಾರ ಸಂಘಟನೆ ಸಭೆಯಲ್ಲಿ ಚರ್ಚೆ ನಡೆಸಿ ಕೊರೋನಾ ಲಸಿಕೆ ಬೌದ್ಧಿಕ ಆಸ್ತಿ ಹಕ್ಕಿನ ವಿನಾಯಿತಿ ನೀಡಿದರೆ, ಪೇಟೆಂಟ್ ಇಲ್ಲದ ಕಂಪನಿಗಳು ಕೂಡ ಲಸಿಕೆಯನ್ನು ಉತ್ಪಾದಿಸಬಹುದಾಗಿದೆ. ಅಮೆರಿಕದ ಫೈಜರ್, ಮಾಡೆರ್ನಾ, ರಷ್ಯಾದ ಸ್ಪುಟ್ನಿಕ್ ಎಲ್ಲಾ ಕೊರೋನಾ ಲಸಿಕೆ ಪೇಟೆಂಟ್ ಇಲ್ಲದೆ ಉತ್ಪಾದಿಸಬಹುದಾಗಿದೆ. ಇದರಿಂದ ಭಾರತಕ್ಕೆ ಹೆಚ್ಚು ಅನುಕೂಲವಾಗಲಿದೆ. ಲಸಿಕೆ ಕೊರತೆ ಎದುರಿಸುತ್ತಿರುವ ಭಾರತಕ್ಕೆ ಅನುಕೂಲವಾಗಲಿದೆ ಎನ್ನಲಾಗಿದೆ.