ನವದೆಹಲಿ: ದೇಶದಲ್ಲಿ ಕೋವಿಡ್-19 ಬಿಕ್ಕಟ್ಟು ಆರೋಗ್ಯ ವ್ಯವಸ್ಥೆಯನ್ನು ಹದಗೆಡಿಸಿದೆ. ಈ ಕೊರೋನಾ ವೈರಸ್ ಮತ್ತಷ್ಟು ವಿಕಸನಗೊಳ್ಳುತ್ತಲೇ ದೇಶದಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ಮೂರನೇ ಅಲೆ ಎದುರಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ಉನ್ನತ ವೈಜ್ಞಾನಿಕ ಸಲಹೆಗಾರ ಮಾಹಿತಿ ನೀಡಿದ್ದಾರೆ.
ಆರೋಗ್ಯ ವ್ಯವಹಾರಗಳ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕೇಂದ್ರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯ ರಾಘವನ್ ಅವರು, ದೇಶವು ಎದುರಿಸುತ್ತಿರುವ ಕೊರೋನಾನ ಎರಡನೇ ಅಲೆ ತೀವ್ರತೆಯನ್ನು ನಿರೀಕ್ಷಿಸಲಾಗಿರಲಿಲ್ಲ. ಅದೇ ರೀತಿ ಮೂರನೇ ಅಲೆ ಅಬ್ಬರವನ್ನು ಕಾಣಬೇಕಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮೂರನೇ ಅಲೆ ಅನಿವಾರ್ಯವಾಗಿದೆ. ಆದರೆ, ಯಾವ ಸಮಯದಲ್ಲಿ ಮೂರನೇ ಅಲೆ ಎದುರಾಗಲಿದೆ ಎಂಬುದು ಸ್ಪಷ್ಟವಾಗಿಲ್ಲ. ಕೊರೋನಾ ಎರಡನೇ ಅಲೆಯಿಂದ ಅಪಾರ ಸಾವು-ನೋವು ಉಂಟಾಗಿದೆ. ಸಾವಿರಾರು ಜನರನ್ನು ಕೊಂದ ಕೊರೋನಾ ವೈರಸ್ ಹೊಸತಳಿಗಳನ್ನು ಎದುರಿಸಲು ಲಸಿಕೆಗಳನ್ನು ನವೀಕರಿಸಬೇಕಾದ ಅಗತ್ಯವಿದೆ. ಕೊರೋನಾ 3ನೇ ಅಲೆ ಎದುರಿಸಲು ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.