ನವದೆಹಲಿ: ದೇಶಾದ್ಯಂತ ಕೊರೋನಾ ಎರಡನೇ ಅಲೆ ಅಬ್ಬರಕ್ಕೆ ಜನ ತತ್ತರಿಸಿದ್ದಾರೆ. ಸೋಂಕಿತರು ಮತ್ತು ಸಾವಿನ ಸಂಖ್ಯೆ ಭಾರೀ ಏರಿಕೆಯಾಗಿ ಬೆಡ್, ಆಕ್ಸಿಜನ್ ಸಿಗದಂತಾಗಿದೆ.
ಕೊರೋನಾ ಎರಡನೇ ಅಲೆ ಭೀಕರತೆಯಿಂದ ಜನ ನಲುಗಿರುವ ಹೊತ್ತಲ್ಲೇ ಮತ್ತೊಂದು ಆಘಾತಕಾರಿ ಮಾಹಿತಿ ಆರೋಗ್ಯ ಸಚಿವಾಲಯದಿಂದ ಹೊರಬಿದ್ದಿದೆ. ಕೊರೋನಾ ಮೂರನೇ ಅಲೆ ಕಟ್ಟಿಟ್ಟ ಬುತ್ತಿಯಾಗಿದೆ. ಕೇಂದ್ರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯರಾಘವನ್ ಅವರು ಕೊರೋನಾ ಮೂರನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ರೂಪಾಂತರ ವೈರಸ್ ಗಳು ಹೆಚ್ಚಾಗಿ ಹರಡುತ್ತಿವೆ. ಕೊರೋನಾ ಮೂರನೇ ಅಲೆ ಹರಡುವ ಸಾಧ್ಯತೆ ಇದೆ. ಲಸಿಕೆಗಳು ರೂಪಾಂತರ ವೈರಸ್ ಗಳ ವಿರುದ್ಧ ಪರಿಣಾಮಕಾರಿಯಾಗಿವೆ. ಆದರೆ ರೂಪಾಂತರ ವೈರಸ್ ವೇಗವಾಗಿ ಹರಡುತ್ತಿದ್ದು, ರೋಗನಿರೋಧಕ ತಪ್ಪಿಸುವ ಜೊತೆಗೆ ರೋಗದ ತೀವ್ರತೆಯನ್ನು ಹೆಚ್ಚಿಸಬಹುದು. ಮೂರನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಹೇಳಲಾಗಿದೆ.