ನಿಮ್ಮ ಮಗಳ ಭವಿಷ್ಯವನ್ನು ಸುರಕ್ಷಿತಗೊಳಿಸುವ ಯೋಚನೆಯಲ್ಲಿದ್ದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿಶೇಷ ಸೌಲಭ್ಯವನ್ನು ನೀಡುತ್ತಿದೆ. ಪಿಎನ್ಬಿ ಟ್ವೀಟ್ ಮಾಡುವ ಮೂಲಕ ಈ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದೆ. ಮಗಳಿಗಾಗಿ 15 ಲಕ್ಷ ರೂಪಾಯಿಗಳನ್ನು ಸುಲಭವಾಗಿ ಉಳಿಸುವುದು ಹೇಗೆ ಎಂಬುದನ್ನು ಬ್ಯಾಂಕ್ ವಿವರಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯುವ ಮೂಲಕ ನಿಮ್ಮ ಮಗಳನ್ನು ಲಕ್ಷಾಧಿಪತಿಯಾಗಿ ಮಾಡಬಹುದು ಎಂದು ಬ್ಯಾಂಕ್ ಹೇಳಿದೆ. ನಿಮ್ಮ ಮಗಳ ಕನಸನ್ನು ನನಸು ಮಾಡಲು ಪಂಜಾಬ್ ನ್ಯಾಷನಲ್ ಬ್ಯಾಂಕ್ ಜೊತೆ ಕೈಜೋಡಿಸಿ. ಹೆಚ್ಚಿನ ಮಾಹಿತಿಗೆ https://tinyurl.com/rwy2e9je ಕ್ಲಿಕ್ ಮಾಡಿ ಎಂದು ಬ್ಯಾಂಕ್ ಟ್ವೀಟ್ ಮಾಡಿದೆ.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಕನಿಷ್ಠ 250 ರೂಪಾಯಿ ಠೇವಣಿ ಇಡಬೇಕು. ಗರಿಷ್ಠ 1,50,000 ರೂಪಾಯಿವರೆಗೆ ಠೇವಣಿ ಇಡಹುದು. ಈ ಖಾತೆಯನ್ನು ತೆರೆಯುವ ಮೂಲಕ ಮಗಳ ಶಿಕ್ಷಣ ಮತ್ತು ಭವಿಷ್ಯವನ್ನು ಸುರಕ್ಷಿತಗೊಳಿಸಬಹುದು. ಸುಕನ್ಯಾ ಸಮೃದ್ಧಿ ಯೋಜನೆಯ ವಾರ್ಷಿಕ ಬಡ್ಡಿದರವು ಪ್ರಸ್ತುತ ಶೇಕಡಾ 7.6 ರಷ್ಟಿದೆ. ಈ ಬಡ್ಡಿದರಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಕೇಂದ್ರ ಸರ್ಕಾರ ಪರಿಷ್ಕರಿಸುತ್ತದೆ.
ಖಾತೆ ತೆರೆಯುವ ದಿನಾಂಕದಿಂದ 21 ವರ್ಷಗಳ ನಂತರ ಅಥವಾ ಮಗಳಿಗೆ 18 ವರ್ಷ ವಯಸ್ಸಾದ ನಂತರ ಸುಕನ್ಯಾ ಸಮೃದ್ಧಿ ಖಾತೆಯು ಮದುವೆಯ ಸಮಯದಲ್ಲಿ ಪಕ್ವವಾಗುತ್ತದೆ. ಮಗಳ ಜನನ ಪ್ರಮಾಣ ಪತ್ರವನ್ನು ಅಂಚೆ ಕಚೇರಿ ಅಥವಾ ಬ್ಯಾಂಕಿನಲ್ಲಿ ಸಲ್ಲಿಸಬೇಕು. ಈ ಯೋಜನೆಯಲ್ಲಿ ಪ್ರತಿ ವರ್ಷ 3000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಅಂದರೆ 14 ವರ್ಷ 36000 ರೂಪಾಯಿಗಳನ್ನು ಹೂಡಿಕೆ ಮಾಡಿದ್ರೆ 14 ವರ್ಷಗಳ ನಂತರ ನಿಮಗೆ 9,11,574 ರೂಪಾಯಿ ಸಿಗುತ್ತದೆ. ವಾರ್ಷಿಕ ಶೇಕಡಾ 7.6ರಷ್ಟು ಬಡ್ಡಿ ಅನ್ವಯಿಸಿದ್ರೆ 21 ವರ್ಷಗಳಲ್ಲಿ ಅಂದರೆ 15,22,221 ರೂಪಾಯಿ ಸಿಗುತ್ತದೆ.