![](https://kannadadunia.com/wp-content/uploads/2021/01/lic_5932119_835x547-m.jpg)
ಮುಂದಿನ ವಾರ ಎಲ್‌ಐಸಿ ಕಚೇರಿಗೆ ಹೋಗುವ ಪ್ಲಾನ್ ನಲ್ಲಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಮುಂದಿನ ವಾರದಿಂದ ಎಲ್ಐಸಿ ಕಚೇರಿ ಕೇವಲ 5 ದಿನಗಳ ಕಾಲ ಮಾತ್ರ ತೆರೆದಿರುತ್ತದೆ. ಅಂದರೆ ಶನಿವಾರ ಮತ್ತು ಭಾನುವಾರ ಕಚೇರಿಗೆ ರಜೆ.
ಈ ಮೊದಲು ಭಾನುವಾರ ಮಾತ್ರ ರಜಾದಿನವಿತ್ತು. ಆದರೆ ಇನ್ಮುಂದೆ ಎಲ್‌ಐಸಿ ಕಚೇರಿಗಳು ಶನಿವಾರವೂ ಮುಚ್ಚಿರುತ್ತವೆ. ಮೇ 10 ರಿಂದ ಈ ನಿಯಮ ಅನ್ವಯವಾಗಲಿದೆ. ಪ್ರತಿ ಶನಿವಾರವನ್ನೂ ಸಾರ್ವಜನಿಕ ರಜಾದಿನವೆಂದು ಪರಿಗಣಿಸಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಮೇ 10 ರ ನಂತರ ಪ್ರತಿ ಶನಿವಾರ ಮತ್ತು ಭಾನುವಾರ ಉದ್ಯೋಗಿಗಳಿಗೆ ರಜೆ. ಶನಿವಾರ ಎಲ್ಐಸಿ ಕಚೇರಿಗೆ ಹೋಗಬೇಡಿ. ವಾರದಲ್ಲಿ 5 ದಿನಗಳು ಮಾತ್ರ ಸಿಬ್ಬಂದಿ ಕೆಲಸ ಮಾಡಲಿದ್ದಾರೆ. ಎಲ್‌ಐಸಿ ಕಚೇರಿ ಸೋಮವಾರದಿಂದ ಶುಕ್ರವಾರದವರೆಗೆ ತೆರೆದಿರುತ್ತದೆ, ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ಕೆಲಸದ ಸಮಯವಾಗಿದೆ. ಈ ಬಗ್ಗೆ ಎಲ್ ಐ ಸಿ, ಗ್ರಾಹಕರಿಗೆ ಮಾಹಿತಿ ನೀಡುತ್ತಿದೆ.