ದೇಶದಲ್ಲಿ ಒಂದು ಕಡೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಇನ್ನೊಂದು ಕಡೆ ಕೊರೊನಾ ಲಸಿಕೆ ಕೊರತೆ ಎದುರಾಗಿದೆ. ಮೇ. 1ರಿಂದ 18 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ ಹಾಕಲಾಗ್ತಿದೆ. ಆದ್ರೆ ಅನೇಕ ಕಡೆ ಲಸಿಕೆ ಅಭಾವ ಎದುರಾಗಿದ್ದು, ಲಸಿಕೆ ಹಾಕಲಾಗ್ತಿಲ್ಲ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಲಸಿಕೆಯನ್ನು ಹಾಳು ಮಾಡದಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಕೇರಳದ ಉದಾಹರಣೆಯನ್ನು ಅವರು ಎಲ್ಲರ ಮುಂದಿಟ್ಟಿದ್ದಾರೆ. ಬುಧವಾರ ಕೇರಳದ ಮುಖ್ಯಮಂತ್ರಿ ಮಾಡಿರುವ ಟ್ವೀಟರನ್ನು ಮೋದಿ ಟ್ಯಾಕ್ ಮಾಡಿದ್ದಾರೆ. ಕೇರಳಕ್ಕೆ ಕೇಂದ್ರ ಸರ್ಕಾರ 73,38,806 ಡೋಸ್ ಲಸಿಕೆಗಳನ್ನು ನೀಡಿತ್ತು. ಲಭ್ಯವಿರುವ ಹೆಚ್ಚುವರಿ ಪ್ರಮಾಣವನ್ನು ಬಳಸಿಕೊಂಡು 74,26,164 ಡೋಸ್‌ಗಳನ್ನು ನೀಡಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಗಳು ರಾಜ್ಯದ ಆರೋಗ್ಯ ಕಾರ್ಯಕರ್ತರನ್ನು, ವಿಶೇಷವಾಗಿ ದಾದಿಯರನ್ನು ಶ್ಲಾಘಿಸಿದ್ದರು.
ಹಾಸನ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಣೆ
ಇದನ್ನು ಟ್ಯಾಗ್ ಮಾಡಿದ ಪ್ರಧಾನಿ ಮೋದಿ, ಲಸಿಕೆ ವ್ಯರ್ಥ ಕಡಿಮೆ ಮಾಡುವಲ್ಲಿ ನಮ್ಮ ಆರೋಗ್ಯ ಕಾರ್ಯಕರ್ತರು ಮತ್ತು ದಾದಿಯರ ಉದಾಹರಣೆಯನ್ನು ನೋಡಲು ಸಂತೋಷವಾಗುತ್ತದೆ ಎಂದು ಬರೆದಿದ್ದಾರೆ. ಕೋವಿಡ್ -19 ವಿರುದ್ಧದ ಹೋರಾಟವನ್ನು ಬಲಪಡಿಸಲು ಲಸಿಕೆ ವ್ಯರ್ಥ ಕಡಿಮೆ ಮಾಡುವುದು ಮುಖ್ಯವೆಂದು ಮೋದಿ ಹೇಳಿದ್ದಾರೆ.