alex Certify ಟ್ರ್ಯಾಕ್ಟರ್​ಗೆ ದಾರಿ ಬೇಕೆಂದು ಅಂತಾರಾಷ್ಟ್ರೀಯ ಗಡಿಯನ್ನೇ ಅದಲುಬದಲು ಮಾಡಿದ ರೈತ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರ್ಯಾಕ್ಟರ್​ಗೆ ದಾರಿ ಬೇಕೆಂದು ಅಂತಾರಾಷ್ಟ್ರೀಯ ಗಡಿಯನ್ನೇ ಅದಲುಬದಲು ಮಾಡಿದ ರೈತ..!

ವಾಹನಗಳನ್ನ ಯು ಟರ್ನ್​ ಮಾಡಬೇಕಾದರೆ ಸ್ವಲ್ವ ಹೆಚ್ಚಿನ ಜಾಗವೇ ಬೇಕಾಗುತ್ತೆ. ಇದೇ ರೀತಿ ತನ್ನ ಟ್ರ್ಯಾಕ್ಟರ್​ನ್ನು ಟರ್ನ್​ ಮಾಡುತ್ತಿದ್ದ ವ್ಯಕ್ತಿಯೊಬ್ಬ ದಾರಿಗೆ ಅಡ್ಡಲಾದ ಕಲ್ಲನ್ನ ಸರಿಸಿದ್ದಾನೆ. ವಿಷಯ ಇಷ್ಟೇ ಆಗಿದ್ದರೆ ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದ ವಿಚಾರವೇ ಅಲ್ಲ. ಆದರೆ ಈತ ಸರಿಸಿದ್ದ ಕಲ್ಲು ಬೆಲ್ಜಿಯಂ ಹಾಗೂ ಫ್ರಾನ್ಸ್​ ನಡುವಿನ ಅಂತಾರಾಷ್ಟ್ರೀಯ ಗಡಿಯ ಕಲ್ಲಾಗಿತ್ತು.

ಅಂತಾರಾಷ್ಟ್ರೀಯ ಗಡಿಯ ಗುರುತನ್ನ ಈ ರೈತ ಕೆಲ ಮೀಟರ್​​ಗಳವರೆಗೆ ತಿರುಗಿಸಿದ್ದಾನೆ. ಫ್ರಾನ್ಸ್​ ಹಾಗೂ ಬೆಲ್ಜಿಯಂ ನಡುವಿನ ಗುರುತಿನ ಕಲ್ಲನ್ನ ರೈತ ತಿರುಗಿಸಿದ್ದರ ಪರಿಣಾಮ ಫ್ರಾನ್ಸ್​ನ ಭೂ ಪ್ರದೇಶವು ಸುಮಾರು 2.25 ಮೀಟರ್​ಗಳವರೆಗೆ ಕುಗ್ಗಿದೆ.

ರೈತರಿಗೆ ಭರ್ಜರಿ ಗುಡ್‌ ನ್ಯೂಸ್:‌ ಶೀಘ್ರದಲ್ಲೇ ಖಾತೆ ಸೇರಲಿದೆ 2000 ರೂ.

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ತನ್ನ ಟ್ರ್ಯಾಕ್ಟರ್​ಗೆ ಅಡ್ಡಲಾಗಿದೆ ಎಂಬ ಕಾರಣಕ್ಕೆ ಈ ಕಲ್ಲಿನ ಜಾಗವನ್ನ ಬದಲಾಯಿಸಿದ್ದಾನೆ. ಸ್ಥಳೀಯ ಇತಿಹಾಸಕಾರರು ಗುರುತಿನ ಕಲ್ಲಿನ ಸ್ಥಾನ ಪಲ್ಲಟವನ್ನ ಗಮನಿಸುವವರೆಗೂ ಈ ವಿಚಾರ ಬೆಳಕಿಗೆ ಬಂದಿರಲಿಲ್ಲ. ಹಳೆಯ ನಕ್ಷೆಯನ್ನ ತೆಗೆದು ನೋಡಿದ ಬಳಿಕ ಕಲ್ಲು ಸ್ಥಾನ ಪಲ್ಲಟವಾಗಿರೋದು ಇತಿಹಾಸಕಾರರ ಗಮನಕ್ಕೆ ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...