ಐಪಿಎಲ್ ಕೊರೊನಾ ವೈರಸ್ ಗೆ ಬಲಿಯಾಗಿದೆ. ಆಟಗಾರರಿಗೆ ಕೊರೊನಾ ಕಾಣಿಸಿಕೊಂಡ ಕಾರಣ ಐಪಿಎಲ್ 2021ರ ಪಂದ್ಯವನ್ನು ರದ್ದು ಮಾಡಲಾಗಿದೆ. ಬಿಸಿಸಿಐನ ಈ ನಿರ್ಧಾರವನ್ನು ಆಟಗಾರರು ಸ್ವಾಗತಿಸಿದ್ದಾರೆ.
ಐಪಿಎಲ್ ಮುಂದೂಡುವ ನಿರ್ಧಾರವನ್ನು ಚೆನ್ನೈ ಸೂಪರ್ ಕಿಂಗ್ಸ್ ಸ್ಟಾರ್ ಆಟಗಾರ ಸುರೇಶ್ ರೈನಾ ಬೆಂಬಲಿಸಿದ್ದಾರೆ. ಐಪಿಎಲ್ 2021 ರಲ್ಲಿ ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗದಿಂದಾಗಿ ಲೀಗ್ ಅನ್ನು ರದ್ದುಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಈ ನಿರ್ಧಾರವನ್ನು ಬೆಂಬಲಿಸಿದ ಸುರೇಶ್ ರೈನಾ ಟ್ವೀಟ್ ಮಾಡಿದ್ದು, ಇದು ತಮಾಷೆಯಲ್ಲ ಎಂದಿದ್ದಾರೆ.
ಇದು ತಮಾಷೆಯಲ್ಲ. ಅನೇಕ ಜೀವಗಳು ಅಪಾಯದಲ್ಲಿವೆ. ಜೀವನದಲ್ಲಿ ಇಷ್ಟು ಅಸಹಜತೆ ಎದುರಿಸಿರಲಿಲ್ಲವೆಂದು ಸುರೇಶ್ ರೈನಾ ಹೇಳಿದ್ದಾರೆ. ಕೊರೊನಾ ಹೋರಾಟದಲ್ಲಿ ಅನೇಕರು ಸಹಾಯಕ್ಕೆ ನಿಂತಿದ್ದಾರೆ. ಆದ್ರೆ ಸಂಪನ್ಮೂಲದ ಸಮಸ್ಯೆ ಎದುರಾಗಿದೆ. ಈ ದೇಶದ ಪ್ರತಿಯೊಬ್ಬ ವ್ಯಕ್ತಿಯು ಜೀವ ಉಳಿಸಲು ಪರಸ್ಪರ ಹೋರಾಡುತ್ತಿದ್ದಾನೆ. ಅವರಿಗೆ ಒಂದು ಸೆಲ್ಯೂಟ್ ಎಂದು ಸುರೇಶ್ ರೈನಾ ಟ್ವಿಟ್ ಮಾಡಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ವೃದ್ಧಿಮಾನ್ ಸಹಾ ಮತ್ತು ದೆಹಲಿ ಕ್ಯಾಪಿಟಲ್ಸ್ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾಗೆ ಕೊರೊನಾ ಪಾಸಿಟಿವ್ ಆಗಿದೆ. ಇದಕ್ಕೂ ಮುನ್ನ ಕೆಕೆಆರ್ ಆಟಗಾರರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಸಿಬ್ಬಂದಿಗೆ ಕೊರೊನಾ ಕಾಣಿಸಿಕೊಂಡಿತ್ತು. ಕೊರೊನಾ ಪ್ರಕರಣ ಹೆಚ್ಚಾಗ್ತಿದ್ದಂತೆ ಬಿಸಿಸಿಐ, ಐಪಿಎಲ್ ಪಂದ್ಯವನ್ನು ರದ್ದು ಮಾಡಿದೆ.