ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ಸೋಂಕಿಗೆ ಹೆದರಿರುವ ಜನರು ಅಕ್ಕಪಕ್ಕದವರು ಹೇಳಿದ ಎಲ್ಲ ಔಷಧಿ ತೆಗೆದುಕೊಳ್ತಿದ್ದಾರೆ. ಎಲ್ಲ ಮನೆ ಮದ್ದುಗಳನ್ನು ಮಾಡ್ತಿದ್ದಾರೆ. ಇದ್ರಲ್ಲಿ ಸ್ಟೀಮ್ ಕೂಡ ಒಂದು. ಸ್ಟೀಮ್ ತೆಗೆದುಕೊಳ್ಳುವುದ್ರಿಂದ ಕೊರೊನಾ ವೈರಸ್ ಕೊಲ್ಲಬಹುದು ಎಂಬ ನಂಬಿಕೆಯಿದೆ. ಇದು ಎಷ್ಟು ಸತ್ಯ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಅನೇಕ ಸಂಶೋಧನೆಗಳ ಪ್ರಕಾರ, ಸ್ಟೀಮ್ ತೆಗೆದುಕೊಳ್ಳುವುದರಿಂದ ಸಾಕಷ್ಟು ಪ್ರಯೋಜನವಿದೆ. ಸ್ಟೀಮ್ ತೆಗೆದುಕೊಳ್ಳುವುದರಿಂದ ಗಂಟಲಿನಲ್ಲಿ ಸಂಗ್ರಹವಾಗಿರುವ ಕಫ ತೆಗೆಯಬಹುದು. ಜರ್ನಲ್ ಆಫ್ ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ ನಡೆಸಿದ ಅಧ್ಯಯನದ ಪ್ರಕಾರ, ಸ್ಟೀಮ್ ತೆಗೆದುಕೊಳ್ಳುವುದರಿಂದ ನಮ್ಮ ಮೂಗಿನಲ್ಲಿರುವ ಲೋಳೆ ಕಡಿಮೆಯಾಗುತ್ತದೆ. ಇದ್ರಿಂದ ಉಸಿರಾಡುವುದು ಸುಲಭವಾಗುತ್ತದೆ. ವೈದ್ಯರು ಸ್ಟೀಮ್ ತೆಗೆದುಕೊಳ್ಳಲು ಶಿಫಾರಸು ಮಾಡುತ್ತಾರೆ. ಆದ್ರೆ ಇದ್ರಿಂದ ಕೊರೊನಾ ವೈರಸ್ ಸಾಯುವುದಿಲ್ಲ.
ಸ್ಟೀಮ್ ತೆಗೆದುಕೊಳ್ಳುವುದ್ರಿಂದ ದೇಹಕ್ಕೆ ಆಮ್ಲಜನಕ ಸಿಗುತ್ತದೆ. ಉಸಿರಾಟ ಸುಲಭವಾಗುತ್ತದೆ.ಆದರೆ ವೈರಸ್ ಸಾಯುವುದಿಲ್ಲ. ಕೊರೊನಾ ವೈರಸ್ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ. ಹಾಗಾಗಿ ರೋಗಿಗೆ ಉಸಿರಾಟದ ತೊಂದರೆ ಎದುರಾಗುತ್ತದೆ. ಸ್ಟೀಮ್ ತೆಗೆದುಕೊಳ್ಳುವುದ್ರಿಂದ ಉಸಿರಾಟ ಸುಲಭವಾಗುತ್ತದೆ.
ಹೆಚ್ಚು ಸ್ಟೀಮ್ ತೆಗೆದುಕೊಳ್ಳುವುದ್ರಿಂದ ನಷ್ಟವೂ ಇದೆ. ಗಂಟಲಿನ ಕೋಶಗಳು ಸುಟ್ಟುಹೋಗುವ ಸಾಧ್ಯತೆಯಿದೆ. ಇದ್ರಿಂದ ಉಸಿರಾಡುವ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ಒಂದು ಮಿತಿಯಲ್ಲಿ ಸ್ಟೀಮ್ ತೆಗೆದುಕೊಳ್ಳಬೇಕು. ದಿನದಲ್ಲಿ ಎರಡು ಬಾರಿ ಮಾತ್ರ ಸ್ಟೀಮ್ ತೆಗೆದುಕೊಳ್ಳಬೇಕೆಂದು ವೈದ್ಯರು ಸಲಹೆ ನೀಡ್ತಾರೆ.