ನವದೆಹಲಿ: ದೇಶದಲ್ಲಿ ಜುಲೈವರೆಗೆ ಕೊರೋನಾ ಲಸಿಕೆ ಕೊರತೆ ಉಂಟಾಗಲಿದೆ ಎಂದು ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯಸ್ಥ ಆದಾರ್ ಪೂನಾವಾಲಾ ಹೇಳಿದ್ದಾರೆ.
ಆರ್ಡರ್ ಇಲ್ಲದ ಕಾರಣ ಹೆಚ್ಚು ಲಸಿಕೆಯನ್ನು ಉತ್ಪಾದಿಸಿಲ್ಲ ಎಂದು ಅವರು ತಿಳಿಸಿದ್ದಾರೆ. ದೇಶದಲ್ಲಿ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಕಾರ್ಯ ಆರಂಭವಾಗಿದೆ. ಆದರೆ, ಬಹುತೇಕ ಕಡೆ ಲಸಿಕೆ ಲಭ್ಯವಿಲ್ಲದ ಕಾರಣ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಿಕೆ ಕಾರ್ಯ ಮುಂದುವರೆದಿದೆ. ಕೆಲವರಿಗೆ ಎರಡನೇ ಡೋಸ್ ಕೂಡ ಸಿಗುತ್ತಿಲ್ಲ.
ಕೋವಿಶೀಲ್ಡ್ ಶರ್ಟ್ ಲಸಿಕೆ ಉತ್ಪಾದಿಸುವ ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯಸ್ಥ ಆದಾರ್ ಪೂನಾವಾಲಾ, ಸದ್ಯಕ್ಕೆ ಲಸಿಕೆಯ ಕೊರತೆ ಮುಂದುವರೆಯಲಿದೆ. ಜುಲೈವರೆಗೆ ಕೊರತೆ ಉಂಟಾಗಲಿದೆ ಎಂದು ಹೇಳಿದ್ದಾರೆ.
ತಿಂಗಳಿಗೆ 6 -7 ಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡುತ್ತಿದ್ದು, ಜುಲೈ ವೇಳೆಗೆ 10 ಕೋಟಿ ಡೋಸ್ ಉತ್ಪಾದನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಂತರ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕೆ ಲಭ್ಯವಾಗಲಿದೆ. ದೇಶದಲ್ಲಿ ಎರಡನೇ ಅಲೆ ಇಷ್ಟೊಂದು ಪ್ರಮಾಣದಲ್ಲಿ ವ್ಯಾಪಿಸುವ ನಿರೀಕ್ಷೆ ಇರಲಿಲ್ಲ. ಹಾಗಾಗಿ, ಸರ್ಕಾರ, ಅಧಿಕಾರಿಗಳು ಲಸಿಕೆಗೆ ಆರ್ಡರ್ ಕೊಟ್ಟಿರಲಿಲ್ಲ. ಹೀಗಾಗಿ ನಾವು ಕೂಡ ಸಿದ್ಧತೆ ಮಾಡಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ.