ಕೋವಿಡ್ 19 ಆಂಟಿ ಓರಲ್ ಮಾತ್ರೆಯು ಸದ್ಯ ಪ್ರಾಯೋಗಿಕ ಪರೀಕ್ಷೆಯ ಪ್ರಾಥಮಿಕ ಹಂತದಲ್ಲಿದ್ದು ವರ್ಷಾಂತ್ಯದಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ ಎಂದು ಅಮೆರಿಕ ಮೂಲಕದ ಲಸಿಕೆ ತಯಾರಕ ಕಂಪನಿ ಫೈಜರ್ ಸಿಇಒ ಆಲ್ಬರ್ಟ್ ಬೌರ್ಲಾ ಹೇಳಿದ್ದಾರೆ.
ಜರ್ಮನಿಯ ಬಯೋಟೆಕ್ ಜೊತೆ ಸೇರಿ ಮೊದಲ ಕೋವಿಡ್ 19 ಲಸಿಕೆಯನ್ನ ತಯಾರಿಸಿದ್ದ ಈ ಕಂಪನಿಯು ಮಾರ್ಚ್ನಿಂದ ಕೋವಿಡ್ 19 ಮಾತ್ರೆಯ ತಯಾರಿಯಲ್ಲಿ ಬ್ಯುಸಿಯಾಗಿದೆ. ಪ್ರಾಯೋಗಿಕ ಪರೀಕ್ಷೆಗಳು ಒಳ್ಳೆ ರೀತಿಯಲ್ಲಿ ನಡೆದು ಎಲ್ಲಾ ಹಂತಗಳಲ್ಲೂ ಈ ಮಾತ್ರೆಯು ಯಶಸ್ಸನ್ನು ಸಾಧಿಸಿದ್ರೆ ವರ್ಷಾಂತ್ಯದಲ್ಲಿ ಅಮೆರಿಕದಲ್ಲಿ ಜನ ಬಳಕೆಗೆ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.
ಕಳೆದ ತಿಂಗಳು ಈ ಪ್ರತಿಷ್ಟಿತ ಲಸಿಕೆ ತಯಾರಕ ಕಂಪನಿಯು ತಮ್ಮ ಕೋವಿಡ್ ಲಸಿಕೆಯನ್ನು 12 ರಿಂದ 15 ವರ್ಷದವರಿಗೂ ನೀಡಲು ಅನುಮತಿ ನೀಡುವಂತೆ ಕೋರಿ ಅಮೆರಿಕ ಆಹಾರ ಹಾಗೂ ಡ್ರಗ್ ಅಡ್ಮಿನಿಸ್ಟ್ರೇಷನ್ಗೆ ಮನವಿ ಮಾಡಿತ್ತು.
ಫೈಜರ್ ಕಂಪನಿಯು 6 ತಿಂಗಳಿನಿಂದ 11 ವರ್ಷದ ಮಕ್ಕಳಿಗಾಗಿಯೂ ಲಸಿಕೆಯನ್ನ ಸಿದ್ಧಪಡಿಸುತ್ತಿದೆ.