ತಾನು ಗರ್ಭಿಣಿ ಎಂದು ಅರಿವೇ ಇಲ್ಲದ ಮಹಿಳೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಕಸ್ಮಾತ್ ಆಗಿ ಮಗುವಿಗೆ ಜನ್ಮ ನೀಡಿದ ಆಶ್ಚರ್ಯಕರ ಘಟನೆ ವರದಿಯಾಗಿದೆ. ಉಠಾಹ್ದಲ್ಲಿ ವಿಮಾನ ಏರಿದ್ದ ಮಹಿಳೆ ಹುವೈಗೆ ಪ್ರಯಾಣ ಬೆಳೆಸುತ್ತಿದ್ದರು. ಆದರೆ ಮಾರ್ಗ ಮಧ್ಯದಲ್ಲೇ ಈಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ವಿಮಾನದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಹೆರಿಗೆಯಾಗಲು ಕೆಲವೇ ದಿನಗಳು ಬಾಕಿ ಇರುವಾಗ ವಿಮಾನಯಾನ ಏಕೆ ಕೈಗೊಂಡ್ರಿ ಎಂದು ಸಹಪ್ರಯಾಣಿಕರು ಕೇಳಿದ ಪ್ರಶ್ನೆಗೆ ಮಹಿಳೆ ನನಗೆ ನಾನು ಗರ್ಭಿಣಿ ಎಂಬ ವಿಚಾರವೇ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಮಹಿಳೆಯ ಈ ಉತ್ತರ ಕೇಳಿ ಸಹ ಪ್ರಯಾಣಿಕರು ಶಾಕ್ ಆಗಿದ್ದಾರೆ. ಈ ಮಗುವಿಗೆ ಮಹಿಳೆ ರೇಮಂಡ್ ಕೈಮಾನಾ ವಾಡೆ ಕೋಬ್ ಲವಕಿ ಮೌಂಗಾ ಎಂದು ಹೆಸರಿಟ್ಟಿದ್ದಾರೆ.
ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಈ ಸಂಪೂರ್ಣ ದೃಶ್ಯವನ್ನ ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
https://youtu.be/MaR0gdnJL90?t=33