ಅಮೆರಿಕದ ಶಾಲೆಯ ಉಪ ಪ್ರಾಂಶುಪಾಲ ಜನರ ಮೇಲೆ ಬಿಯರ್ ಬಾಟಲಿಯನ್ನ ಎಸೆದಿದ್ದು ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಸಾಕಷ್ಟು ವಿರೋಧವನ್ನ ಎದುರಿಸಿದ್ದಾರೆ.
ಮೊನ್ಮೌತ್ನ ನೆಪ್ಚೂನ್ ಮಿಡಲ್ ಸ್ಕೂಲ್ ಉಪ ಪ್ರಾಂಶುಪಾಲ ಮೈಕೆಲ್ ಸ್ಮುರ್ರೊ ಪತ್ನಿ ಲಿಸಾ, ರೆಸ್ಟಾರೆಂಟ್ ಒಂದರಲ್ಲಿ ತೃತೀಯ ಲಿಂಗಿ ಮಹಿಳಾ ಶೌಚಾಲಯವನ್ನ ಬಳಕೆ ಮಾಡಿದ್ದಾರೆ ಎಂದು ಚಕಾರವೆತ್ತಿದ್ದಾರೆ.
ಪುರುಷನೊಬ್ಬ ಈಗಷ್ಟೇ ಮಹಿಳೆಯರ ಶೌಚಾಲಯಕ್ಕೆ ಹೋಗಿದ್ದನ್ನ ನಾನು ನೋಡಿದ್ದೇನೆ. ಇದು ಸರಿಯಲ್ಲ. ತೃತೀಯ ಲಿಂಗಿ ಮಹಿಳೆಯರ ಶೌಚಾಲಯಕ್ಕೆ ಬರುವಂತಿಲ್ಲ ಎಂದು ಕೂಗಿದ್ದಾರೆ.
ಲಿಸಾ ರೆಸ್ಟಾರೆಂಟ್ನ ಎದುರು ಕೂಗಿದ್ದಾರೆ. ಇದನ್ನ ನೋಡಿದ ಗ್ರಾಹಕರೊಬ್ಬರು ಉಳಿದ ಗ್ರಾಹಕರ ಎದುರು ಈಕೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಇದಕ್ಕೆ ಪ್ರತ್ಯುತ್ತರ ನೀಡಿದ ಲೀಸಾ, ತೃತೀಯ ಲಿಂಗಿ ಮಹಿಳಾ ಶೌಚಾಲಯವನ್ನ ಬಳಸೋಕೆ ಹೇಗೆ ಸಾಧ್ಯ..? ನೀವೆಲ್ಲ ಹೇಗೆ ಇದನ್ನ ಒಪ್ಪಿಕೊಳ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದಾದ ಕೆಲವೇ ಸೆಕೆಂಡ್ಗಳಲ್ಲಿ ಸೂಪರ್ಮ್ಯಾನ್ ಟೀ ಶರ್ಟ್ ಧರಿಸಿದ್ದ ಉಪ ಪ್ರಾಂಶುಪಾಲ ಮೈಕೆಲ್ ಬಿಯರ್ನ್ನು ಎಲ್ಲಾ ದೃಶ್ಯವನ್ನ ಚಿತ್ರೀಕರಿಸುತ್ತಿದ್ದ ಮಹಿಳೆಯ ಮೇಲೆ ಎಸೆದಿದ್ದಾರೆ. ಈ ಘಟನೆ ಬಳಿಕ ಮೈಕೆಲ್ ತಾವು ಮಾಡಿದ ಕೃತ್ಯಕ್ಕೆ ಕ್ಷಮೆಯಾಚಿಸಿದ್ದಾರೆ.
https://www.facebook.com/gf.in.a.coma/videos/10158396333309067/?t=99