ಇನ್ನೇನು ನಿವೃತ್ತಿ ಹೊಂದಲಿದ್ದ ಕ್ಲೀನರ್ ಒಬ್ಬರು ತಮ್ಮ ಬಾಸ್ನ ದುರ್ನಡತೆಯನ್ನ ಪತ್ರದ ಮೂಲಕ ವಿವರಿಸಿದ್ದು ಈ ಪತ್ರವು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬಾಸ್ನ ದುರ್ನಡತೆಯಿಂದ ಸೋತು ಹೋಗಿದ್ದ ಕ್ಲೀನರ್ 35 ವರ್ಷಗಳಿಂದ ತಾನು ಅನುಭವಿಸಿದ ನೋವು ಹಾಗೂ ಹತಾಶೆಗಳನ್ನ ಅಕ್ಷರದ ರೂಪದಲ್ಲಿ ಇಳಿಸಿದ್ದಾಳೆ. ಹೆಚ್ಎಸ್ಬಿಸಿ ಬ್ಯಾಂಕ್ನಲ್ಲಿ ನಿವೃತ್ತಿಯ ಕೊನೆಯ ದಿನದಂದು ಈ ಪತ್ರವನ್ನ ಬರೆದಿದ್ದಾಳೆ.
ನೌಕರರ ಜೊತೆ ದಯೆ ಹಾಗೂ ಗೌರವದಿಂದ ನಡೆದುಕೊಳ್ಳೋದನ್ನ ಕಲಿತುಕೊಳ್ಳಿ ಎಂದು ನಿವೃತ್ತ ಮಹಿಳೆ ಬಾಸ್ಗೆ ಸಲಹೆ ನೀಡಿದ್ದಾಳೆ.
ಮುಂದೆ ಈ ಬ್ಯಾಂಕ್ಗೆ ಬರಲಿರುವ ಕ್ಲೀನರ್ಗಾಗಿ ಬೇಕಾದ ವಸ್ತುಗಳನ್ನ ಪಟ್ಟಿ ಮಾಡಿಟ್ಟಿದ್ದೇನೆ. ನಿಮ್ಮ ಕೋಪ ಹಾಗೂ ಕ್ರೂರ ನಡವಳಿಕೆ ನಿಮ್ಮ ವ್ಯಕ್ತಿತ್ವವನ್ನ ತೋರಿಸುತ್ತೆ ಹೊರತು ನನ್ನ ಗುಣವನ್ನಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ನೀವೆಲ್ಲರೂ ಒಂದು ಮಾತನ್ನ ನೆನಪಿನಲ್ಲಿಡಿ. ಈ ಜಗತ್ತಿನಲ್ಲಿ ನೀವು ಏನು ಬೇಕಿದ್ದರೂ ಆಗಬಹುದು ಆದರೆ ಎಲ್ಲಕ್ಕಿಂತ ಮೊದಲು ದಯಾಮಯಿಯಾಗಿ. ಯಾಕೆಂದರೆ ಕ್ಲೀನರ್ಗಿಂತ ನೀವ್ಯಾರೂ ಉತ್ತಮರಲ್ಲ ಎಂದು ಬರೆದಿದ್ದಾರೆ.
ಕ್ಲೀನರ್ಳ ಪುತ್ರ ಈ ಪತ್ರದ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಮೇಲೆ ಆಫೀಸಿನಲ್ಲಿ ಇಂತಹದ್ದೊಂದು ಪತ್ರವಿದೆ ಅನ್ನೋದು ಸಿಬ್ಬಂದಿ ಗಮನಕ್ಕೆ ಬಂದಿದೆ. ಈ ಪತ್ರವನ್ನ ಶೇರ್ ಮಾಡಿದ ಕ್ಲೀನರ್ ಪುತ್ರ, ಇದೇ ಕಾರಣಕ್ಕೆ ನಾನು ನಿನ್ನನ್ನ ಪ್ರೀತಿಸುತ್ತೇನೆ ಅಮ್ಮಾ. ಈಕೆ ಕಳೆದ 35 ವರ್ಷಗಳಿಂದ ಬ್ಯಾಂಕ್ನಲ್ಲಿ ಸ್ವಚ್ಛತಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಳೆ ಹಾಗು ಇಂದು ಮ್ಯಾನೇಜರ್ಗೆ ಇಂತಹದ್ದೊಂದು ಪ್ರೀತಿಯ ಪತ್ರವನ್ನ ನೀಡಿದ್ದಾಳೆ. ನಿವೃತ್ತಿ ದಿನದ ಶುಭಾಶಯಗಳು ಅಮ್ಮಾ ಎಂದು ಶೀರ್ಷಿಕೆ ನೀಡಿದ್ದಾರೆ.
ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಿಕ್ಕಾಪಟ್ಟೆ ಲೈಕ್ಸ್ ಹಾಗೂ ಕಮೆಂಟ್ಗಳನ್ನ ಸಂಪಾದಿಸಿದೆ.