ಏಪ್ರಿಲ್ 6ರಂದು ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಸಿಪಿಐ(ಎಂ) ಭರ್ಜರಿ ಗೆಲವು ದಾಖಲಿಸಿದ ಬಳಿಕ ಸಿಎಂ ಪಿಣರಾಜಿ ವಿಜಯನ್ ಹೊಸ ಸರ್ಕಾರ ಸ್ಥಾಪನೆಗೂ ಮುನ್ನ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಸೋಮವಾರ ಮಧ್ಯಾಹ್ನ ರಾಜಭವನಕ್ಕೆ ತೆರಳಿ ಪಿಣರಾಯಿ ವಿಜಯನ್ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ಗೆ ರಾಜೀನಾಮೆ ಪತ್ರವನ್ನ ಸಲ್ಲಿಸಿದ್ದಾರೆ.
ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವವರೆಗೂ ಸಿಎಂ ಸ್ಥಾನದಲ್ಲೇ ಮುಂದುವರಿಯುವಂತೆ ಪಿಣರಾಯಿ ವಿಜಯನ್ಗೆ ರಾಜ್ಯಪಾಲರು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್ ಸಂಕಷ್ಟ, ಶಬರಿಮಲೆ ವಿವಾದ ಸೇರಿದಂತೆ ವಿವಿಧ ಸಂಘರ್ಷಗಳ ನಡುವೆಯೂ ಪಿಣರಾಯಿ ವಿಜಯನ್ 4 ದಶಕಗಳ ಬಳಿಕ ಮತ್ತೊಮ್ಮೆ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಒಟ್ಟು 140 ಕ್ಷೇತ್ರಗಳಲ್ಲಿ ಎಲ್ಡಿಫ್ 99 ಕ್ಷೇತ್ರಗಳನ್ನ ಗೆದ್ದರೆ 41 ಕ್ಷೇತ್ರಗಳಲ್ಲಿ ಯುಡಿಎಫ್ ಜಯ ಸಾಧಿಸಿದೆ.