ಕ್ರಿಸ್ಮಸ್ ಅಂದರೆ ಬಹುತೇಕ ಎಲ್ಲರಿಗೂ ಇಷ್ಟವಾಗುವಂತಹ ಹಬ್ಬ. ಅದರಲ್ಲೂ ಮಕ್ಕಳಿಗೆ ಸಾಂತಾ ಕ್ಲಾಸ್ ಗಿಫ್ಟ್ ನೀಡುತ್ತಾನೆ ಎಂಬ ಕಾರಣಕ್ಕೆ ಈ ಹಬ್ಬ ಇನ್ನೂ ಇಷ್ಟವಾಗುತ್ತೆ.
ಆದರೆ ತನ್ನ ಜೀವನದಲ್ಲೂ ಈವರೆಗೂ ಭೇಟಿಯಾಗದ ಅವಳಿಗಳಿಗೆ 600 ಮೈಲಿ ದೂರ ವಾಸವಿದ್ದ ಅಪರಿಚಿತ ವ್ಯಕ್ತಿಯೊಬ್ಬ ಸಾಂತಾ ಆಗಿ ಬದಲಾಗಿದ್ದಾನೆ. ಕ್ರಿಸ್ಮಸ್ ಹಬ್ಬ ಕಳೆದು ಕೆಲ ತಿಂಗಳ ಬಳಿಕ ಅವಳಿಗಳಿಗೆ ಉಡುಗೊರೆ ನೀಡುವಲ್ಲಿ ಈ ಸಾಂತಾ ಯಶಸ್ವಿಯಾಗಿದ್ದಾರೆ.
ಅಮೆರಿಕದ ಲ್ಯುಸಿಯಾನ ನಿವಾಸಿಯಾಗಿರುವ ಅಲ್ವಿನ್ ಬಾಂಬರ್ಗ್ ಎಂಬಾತ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ನಕ್ಷತ್ರದ ಆಕಾರದ ಕೆಂಪು ಬಣ್ಣದ ಬಲೂನ್ ಒಂದನ್ನ ನೋಡಿದ್ದರು. ಕಸದ ರಾಶಿಯಲ್ಲಿ ಬಿದ್ದಿದ್ದ ಈ ಬಲೂನ್ನ ಮೇಲೆ ಒಂದು ಪುಟ್ಟ ಟಿಪ್ಪಣಿಯನ್ನ ಬರೆಯಲಾಗಿತ್ತು. ಇದರಲ್ಲಿ ಪ್ರೀತಿಯ ಸಾಂತಾ, ನನ್ನ ಹೆಸರು ಲುನಾ, ನನಗೆ ನಾಲ್ಕು ವರ್ಷ ವಯಸ್ಸು, ನಾನು ಕೆನಾಸ್ನ ಲಿಬರಲ್ನಲ್ಲಿ ವಾಸವಿದ್ದೇನೆ. ಈ ವರ್ಷ ನೀವು ನನಗೆ ಕ್ಯಾಂಡಿ, ಸ್ಪೈಡರ್ ಮ್ಯಾನ್ ಬಾಲ್, ಗೊಂಬೆ, ನಾಯಿ ಹಾಗೂ ನನ್ನ ಲಿಟಲ್ ಪೊನಿಯನ್ನ ತಂದುಕೊಡಿ ಎಂದು ಬರೆಯಲಾಗಿತ್ತು.
ಬಾಂಬರ್ಗ್ ಈ ಬಲೂನಿನ ಫೋಟೋವನ್ನ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದರು. ಅಲ್ಲದೇ ಕೆನಾಸ್ನಲ್ಲಿ ವಾಸಿಸುತ್ತಿದ್ದರ ಅನೇಕರ ಬಳಿ ಈ ಬಲೂನು ಯಾರಿಗೆ ಸೇರಿದ್ದೆಂದು ವಿಚಾರಿಸಿದ್ದಾರೆ. ಸಾಕಷ್ಟು ಹುಡುಕಾಟದ ಬಳಿಕ ಇದು ಅವಳಿ ಹೆಣ್ಣು ಮಕ್ಕಳ ಕೆಲಸ ಎಂದು ತಿಳಿದಿದೆ. ಲುನಾ ಹಾಗೂ ಜೆನಿಲಿಯಾ ಎಂಬ ಪುಟ್ಟ ಬಾಲಕಿಯರು ಡಿಸೆಂಬರ್ 2ರಂದು ಈ ಬಲೂನನ್ನು ಹಾರಿ ಬಿಟ್ಟಿದ್ದರಂತೆ.
ಮೆಕ್ಸಿಕೋದಲ್ಲಿ ಪ್ರವಾಸಕ್ಕೆ ತೆರಳಿದ್ದ ವೇಳೆ ಅವಳಿ ಸಹೋದರಿಯರು ಈ ಬಲೂನನ್ನು ಹಾರಿಸಿದ್ದಾರೆ. ಮಕ್ಕಳನ್ನ ಪತ್ತೆ ಮಾಡಿದ ಬಳಿ ಅವರ ತಾಯಿಯೊಂದಿಗೆ ಸಂಪರ್ಕದಲ್ಲಿದ್ದ ಬಾಂಬರ್ಗ್ ಫೇಸ್ಬುಕ್ನಲ್ಲಿ ಮಕ್ಕಳಿಗೆ ಯಾರಾದರೂ ಉಡುಗೊರೆ ನೀಡಲು ಬಯಸುವಿರಾ ಎಂದು ಕೇಳಿದ್ದರು.
ಇದೀಗ ನಾಲ್ಕು ದೊಡ್ಡ ಬಾಕ್ಸ್ಗಳಲ್ಲಿ ಈ ಮಕ್ಕಳಿಗೆ ಉಡುಗೊರೆ ಬಂದಿದೆ. ನಾಯಿ ಮರಿ ಸೇರಿದಂತೆ ಎಲ್ಲಾ ರೀತಿಯ ಗಿಫ್ಟ್ಗಳನ್ನ ಈ ಅವಳಿ ಮಕ್ಕಳು ಪಡೆದಿದ್ದಾರೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.