alex Certify ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್: ಅಂಗೈನಲ್ಲೇ ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್: ಅಂಗೈನಲ್ಲೇ ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರದ ಮಾಹಿತಿ

ದೇಶದಲ್ಲಿ ಕೊರೋನಾ ಸಾಂಕ್ರಮಿಕ ರೋಗದ ಎರಡನೆಯ ಅಲೆ ತೀವ್ರವಾಗಿದೆ. ಸೋಂಕಿತರು ಮತ್ತು ಸಾವಿನ ಸಂಖ್ಯೆ ಭಾರೀ ಏರಿಕೆಯಾಗಿದೆ.

ಲಸಿಕೆ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ನಿಯಮಗಳನ್ನು ಪಾಲಿಸಲು ಸರ್ಕಾರ ಸಲಹೆ ನೀಡಿದೆ. ಮಾರ್ಗಸೂಚಿಗಳ ಬಗ್ಗೆ ನಾಗರಿಕರಿಗೆ ನಿರಂತರವಾಗಿ ಸಂವಹನ ನಡೆಸುತ್ತಿದೆ. ವಾಟ್ಸಾಪ್ ಮೂಲಕವೂ ಸಮೀಪದ ವ್ಯಾಕ್ಸಿನೇಷನ್ ಕೇಂದ್ರದ ಮಾಹಿತಿ ಪಡೆಯಬಹುದಾಗಿದೆ.

ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾಥ್‌ಕಾರ್ಟ್ ಭಾರತೀಯರಿಗೆ ಅನುಕೂಲವಾಗುವಂತಹ ಮಾಹಿತಿ ನೀಡಿದ್ದಾರೆ. ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆರೋಗ್ಯ ಕಾರ್ಯಕರ್ತರ ಸಹಭಾಗಿತ್ವದಲ್ಲಿ ಆ್ಯಪ್‌ನಲ್ಲಿ ಚಾಟ್‌ ಬಾಟ್‌ಗಳ ರೂಪದಲ್ಲಿ ಸಹಾಯವಾಣಿಗಳನ್ನು ನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.

ಅವುಗಳಲ್ಲಿ ಒಂದು ಮೈಗೊವ್ ಕೊರೋನಾ ಹೆಲ್ಪ್‌ ಡೆಸ್ಕ್ ಚಾಟ್‌ಬಾಟ್(MyGov Corona Helpdesk chatbot), ಇದನ್ನು 2021 ರಲ್ಲಿ ಅನಾವರಣಗೊಳಿಸಲಾಗಿದ್ದು, ಇದೀಗ ವ್ಯಾಕ್ಸಿನೇಷನ್ ಕೇಂದ್ರವನ್ನು ಕಂಡುಹಿಡಿಯಲು ನೆರವಾಗುವಂತೆ ನವೀಕರಿಸಲಾಗಿದೆ.

ಮೈಗೋವ್ ಕರೋನಾ ಹೆಲ್ಪ್‌ ಡೆಸ್ಕ್ ಚಾಟ್‌ ಬಾಟ್ ಅನ್ನು ಬಳಸಲು, ಬಳಕೆದಾರರು +919013151515 ಸಂಖ್ಯೆಯನ್ನು ಸೇವ್ ಮಾಡಬೇಕಿದೆ. ನಂತರ “ನಮಸ್ತೆ”(Namaste) ಬರೆಯುವ ಮೂಲಕ ಚಾಟ್ ಮಾಡಲು ಪ್ರಾರಂಭಿಸಿ, ಸ್ವಲ್ಪ ಸಮಯ ಕಾಯಿರಿ ಮತ್ತು ನಂತರ ಬಳಕೆದಾರರು ಸ್ವಯಂಚಾಲಿತ ಪ್ರತಿಕ್ರಿಯೆಯನ್ನು ಪಡೆಯುತ್ತಾರೆ.

ಬಳಕೆದಾರರಿಗೆ ಮಾಹಿತಿ ಕಳಿಸಲು ತಿಳಿಸಲಾಗುವುದು. ಪಿನ್ ಕೋಡ್ ನಂತರ ಬಳಕೆದಾರರು ಆರು-ಅಂಕಿಯ ಕೋಡ್ ಅನ್ನು ನಮೂದಿಸಬೇಕು ನಂತರ ಸೆಂಡ್ ಒತ್ತಿದ ನಂತರ, ಚಾಟ್‌ ಬಾಟ್ ಅವರ ಸಮೀಪದ ವ್ಯಾಕ್ಸಿನೇಷನ್ ಕೇಂದ್ರಗಳ ಪಟ್ಟಿಯನ್ನು ಕಳುಹಿಸುತ್ತದೆ. ಬಳಕೆದಾರರು wa.me/919013151515 ಗೆ ಭೇಟಿ ನೀಡಬಹುದು. ಈ ಪರ್ಯಾಯ ಮಾರ್ಗದ ಮೂಲಕ ನೇರವಾಗಿ ಚಾಟ್‌ ಬಾಟ್‌ ಮೂಲಕ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...