ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ) 10ನೇ ತರಗತಿ ಪಲಿತಾಂಶ ಜೂನ್ 20 ರೊಳಗೆ ಪ್ರಕಟವಾಗಲಿದೆ. ಪರೀಕ್ಷಾ ವಿಭಾಗದ ನಿಯಂತ್ರಕ ಸತ್ಯಂ ಭಾರದ್ವಾಜ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೊರೋನಾ ಕಾರಣದಿಂದ ರದ್ದುಪಡಿಸಲಾಗಿದ್ದ ಸಿಬಿಎಸ್ಇ 10ನೇ ತರಗತಿ ಫಲಿತಾಂಶವನ್ನು ಜೂನ್ 20 ರೊಳಗೆ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
ಪರೀಕ್ಷೆಗಳಿಗೆ ಅಂಕಗಳನ್ನು ನಿಗದಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಪ್ರತಿವರ್ಷಕ್ಕೆ 20 ಅಂಕಗಳು ಆಂತರಿಕ ಮೌಲ್ಯಮಾಪನಕ್ಕೆ ಒಳಪಟ್ಟಿವೆ. ವರ್ಷವಿಡಿ ನಡೆದ ವಿವಿಧ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಸಾಧನೆ ಆಧಾರದ ಮೇಲೆ 80 ಲೆಕ್ಕಹಾಕಲಾಗುವುದು.
ಮೇ 5 ರೊಳಗೆ ಪ್ರಾಂಶುಪಾಲರ ನೇತೃತ್ವದಲ್ಲಿ ಶಾಲೆಗಳು 8 ಸದಸ್ಯರ ಸಮಿತಿ ರಚಿಸಬೇಕು. ಅಂಕಗಳ ನೀಡಿಕೆ ದಾಖಲೆಗಳನ್ನು ಅಂತಿಮಗೊಳಿಸಿ ಮೇ 10 ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮೇ 25 ರೊಳಗೆ ಫಲಿತಾಂಶ ಅಂತಿಮಗೊಳಿಸಲು ತಿಳಿಸಿದ್ದು, ಜೂನ್ 11 ರೊಳಗೆ ಎಲ್ಲ ಫಲಿತಾಂಶಗಳನ್ನು ಸಿಬಿಎಸ್ಇ ಮಂಡಳಿಗೆ ಸಲ್ಲಿಸಬೇಕು. ಜೂನ್ 20 ರೊಳಗೆ ಪಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.