ಕಾಡು ಮೇಡುಗಳಲ್ಲಿ ಅಲೆಯೋದು ಅಂದರೆ ಸುಲಭದ ಮಾತಲ್ಲ. ಯಾವ ಕ್ಷಣದಲ್ಲಿ ಯಾವ ಪ್ರಾಣಿ ಬೇಕಿದ್ದರೂ ನಿಮ್ಮೆದುರು ಬಂದು ನಿಲ್ಲಬಹುದು. ಇದೇ ರೀತಿ ದಕ್ಷಿಣ ಆಫ್ರಿಕಾದ ಕಾಡೊಂದರಲ್ಲಿ ಸೈಕಲ್ ಮೇಲೆ ತೆರಳುತ್ತಿದ್ದ ವ್ಯಕ್ತಿಯ ಎದುರು ಜಿರಾಫೆಯೊಂದು ಪ್ರತ್ಯಕ್ಷವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ರೌಂಡ್ಸ್ ಹೊಡೀತಿದೆ.
ಸೈಕ್ಲಿಸ್ಟ್ ಎದುರು ಬಂದು ನಿಲ್ಲುವ ಜಿರಾಫೆ ಆತ ಧರಿಸಿದ್ದ ಹೆಲ್ಮೆಟ್ನ್ನು ಮೂಸುತ್ತದೆ. ಸೈಕ್ಲಿಸ್ಟ್ ಸಾವಕಾಶವಾಗಿ ಹಿಂದಿಂದೆ ಹೆಜ್ಜೆ ಹಾಕುತ್ತಾನೆ. ಆದರೆ ಜಿರಾಫೆ ಕೂಡ ಮುಂದೆ ಮುಂದೆ ಬರಲು ಆರಂಭಿಸುತ್ತೆ. ಹಾಗೂ ಆತನ ಹೆಲ್ಮೆಟ್ನ್ನು ಮೂಸಿದ ಜಿರಾಫೆ ಬಳಿಕ ಆತನ ಹೆಗಲ ಮೇಲೆ ತಲೆ ಇಡುತ್ತೆ. ಜಿರಾಫೆ ಕಣ್ಣೆದುರಿಗೇ ಇದ್ದರೂ ಸೈಕ್ಲಿಸ್ಟ್ ಹೆದರಿದಂತೆ ಕಂಡು ಬಂದಿಲ್ಲ. ಸೈಕ್ಲಿಸ್ಟ್ ಜೊತೆ ಇದ್ದ ಸ್ನೇಹಿತ ಈ ಸುಂದರ ಕ್ಷಣವನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ನಮಗೂ ಈ ಚಾನ್ಸ್ ಸಿಗಬೇಕಿತ್ತು ಅಂತಿದಾರೆ.
https://www.instagram.com/p/CODnhJLJyxk/?utm_source=ig_web_copy_link