ನವದೆಹಲಿ: ರಾಜ್ಯದಲ್ಲಿ ಆಮ್ಲಜನಕ, ರೆಮ್ ಡೆಸಿವಿರ್ ಕೊರತೆಯಾಗಿದೆ ಎನ್ನುವ ಹೊತ್ತಲ್ಲೇ ಕೇಂದ್ರದಿಂದ ಸಿಹಿ ಸುದ್ದಿ ಸಿಕ್ಕಿದೆ.
ವಿವಿಧ ರಾಜ್ಯಗಳಿಗೆ ಇಂದು 16.5 ಲಕ್ಷ ವಯಲ್ಸ್ ರೆಮ್ ಡೆಸಿವಿರ್ ಚುಚ್ಚುಮದ್ದು ಹಂಚಿಕೆ ಮಾಡಲಾಗಿದ್ದು, ಕರ್ನಾಟಕ ರಾಜ್ಯಕ್ಕೆ 1.62 ಲಕ್ಷ ವಯಲ್ಸ್ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾಹಿತಿ ನೀಡಿದ್ದಾರೆ.
ಮೇ 3 ರಿಂದ 9 ರವರೆಗಿನ ಬಳಕೆಗಾಗಿ ಇಷ್ಟು ಪ್ರಮಾಣದ ರೆಮ್ ಡೆಸಿವಿರ್ ಚುಚ್ಚುಮದ್ದು ಹಂಚಿಕೆ ಮಾಡಲಾಗಿದೆ. ಅದೇ ರೀತಿ ರಾಜ್ಯದ ಆಮ್ಲಜನಕದ ಪಾಲನ್ನು ಪ್ರತಿದಿನ 865 ಮೆಟ್ರಿಕ್ ಟನ್ ಗೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.