alex Certify BIG NEWS: 18 ವರ್ಷ ಮೇಲ್ಪಟ್ಟವರಿಗೆ ಸೋಮವಾರದಿಂದ ಲಸಿಕೆ; ಸಿಎಂ ಕೇಜ್ರಿವಾಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 18 ವರ್ಷ ಮೇಲ್ಪಟ್ಟವರಿಗೆ ಸೋಮವಾರದಿಂದ ಲಸಿಕೆ; ಸಿಎಂ ಕೇಜ್ರಿವಾಲ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮೇ 1 ರಿಂದ ಲಸಿಕೆ ನೀಡಲಾಗುವುದು. 18 -45 ವರ್ಷದೊಳಗಿನವರಿಗೆ ಸೋಮವಾರದಿಂದ ಲಸಿಕೆ ನೀಡಿಕೆ ಆರಂಭವಾಗಲಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

18 ರಿಂದ 44 ವರ್ಷದೊಳಗಿನವರಿಗೆ ವ್ಯಾಕ್ಸಿನೇಷನ್ ನೀಡಿಕೆ ಕಾರ್ಯ ಒಂದು ಕೇಂದ್ರದಲ್ಲಿ ಆರಂಭವಾಗಿದ್ದು, ಇದು ಸಾಂಕೇತಿಕವಾಗಿದೆ. 4.5 ಲಕ್ಷ ಲಸಿಕೆಗಳು ಬಂದಿದ್ದು, ಎಲ್ಲಾ ಲಸಿಕಾ ಕೇಂದ್ರಗಳಿಗೂ ವಿತರಣೆಯಾಗುತ್ತಿದೆ. ಭಾನುವಾರ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಬರಲಿದ್ದು, ನಂತರದ ದಿನದಿಂದ ದೆಹಲಿಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು. ನೋಂದಣಿ ಮಾಡಿಕೊಂಡವರು ಮಾತ್ರ ಲಸಿಕ ಕೇಂದ್ರಕ್ಕೆ ಬರಬೇಕು ಎಂದು ಅವರು ಮನವಿ ಮಾಡಿದ್ದಾರೆ.

ದೆಹಲಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಹೆಚ್ಚಾಗಿದೆ. ಎಲ್ಲಾ ಆಸ್ಪತ್ರೆಗಳಿಂದ ಆಮ್ಲಜನಕಕ್ಕೆ ಬೇಡಿಕೆ ಬರುತ್ತಿದ್ದು, ನಾವು ಕೋರ್ಟ್ ನಲ್ಲಿ ಮಾತನಾಡಿದ್ದೇವೆ. ದೆಹಲಿಗೆ ಪ್ರತಿದಿನ 976 ಟನ್ ಆಮ್ಲಜನಕ ಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, 490 ಟನ್ ಆಮ್ಲಜನಕ ಮಾತ್ರ ನೀಡಲಾಗುತ್ತಿದೆ. ನಿನ್ನೆ ಕೇವಲ 312 ಟನ್ ಪಡೆದಿದ್ದೇವೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...