ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮನೆ ಖರೀದಿದಾರರಿಗೆ ಖುಷಿ ಸುದ್ದಿ ನೀಡಿದೆ. ಎಸ್‌ಬಿಐ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿದೆ. ಎಸ್‌ಬಿಐ ಗೃಹ ಸಾಲದ ಬಡ್ಡಿದರದ ಆರಂಭಿಕ ದರವು ಶೇಕಡಾ 6.70 ಆಗಲಿದೆ.
ಮನೆ ಖರೀದಿದಾರರು 30 ಲಕ್ಷದವರೆಗಿನ ಸಾಲಗಳಿಗೆ ಶೇಕಡಾ 6.70ರ ಬಡ್ಡಿದರ ಪಾವತಿಸಬೇಕಾಗುತ್ತದೆ. 30 ಲಕ್ಷಕ್ಕಿಂತ ಹೆಚ್ಚಿನ ಮತ್ತು 75 ಲಕ್ಷದವರೆಗಿನ ಸಾಲಗಳಿಗೆ ಶೇಕಡಾ 6.95 ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಮನೆ ಖರೀದಿದಾರರು 75 ಲಕ್ಷಕ್ಕಿಂತ ಹೆಚ್ಚಿನ ಗೃಹ ಸಾಲಕ್ಕೆ ಶೇಕಡಾ 7.05 ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
ಗೃಹ ಸಾಲ ದರವು ಶೇಕಡಾ 6.70 ರಿಂದ ಪ್ರಾರಂಭವಾಗುವ ದೇಶದ ಏಕೈಕ ಬ್ಯಾಂಕ್ ಎಸ್ಬಿಐ ಎಂದು ಬ್ಯಾಂಕ್ ಹೇಳಿದೆ. ಮನೆ ಖರೀದಿದಾರರಿಗೆ ಇದು ನೆಮ್ಮದಿ ನೀಡಲಿದೆ. ಬ್ಯಾಂಕ್ ಮಹಿಳೆಯರಿಗಾಗಿ ವಿಶೇಷ ಕೊಡುಗೆಯನ್ನೂ ನೀಡಿದೆ. ಮಹಿಳೆ ಸಾಲಕ್ಕೆ ಅರ್ಜಿ ಸಲ್ಲಿಸಿದರೆ, ಆಕೆಗೆ 5 ಬಿಪಿಎಸ್ ವರೆಗೆ ರಿಯಾಯಿತಿ ಸಿಗಲಿದೆ. ಯೋನೊ ಆಪ್ ಮೂಲಕ ಸಾಲ ತೆಗೆದುಕೊಂಡರೂ ಗೃಹ ಸಾಲದ ಗ್ರಾಹಕರಿಗೆ 5 ಬಿಪಿಎಸ್ ವರೆಗೆ ರಿಯಾಯಿತಿ ಸಿಗಲಿದೆ.