ಕೋವಿಡ್ ಕಾರಣದಿಂದಾಗಿ ಕೆಲಸವನ್ನು ಕಳೆದುಕೊಂಡಿದ್ದರೆ ಮೂರು ತಿಂಗಳ ಸಂಬಳ ಮತ್ತು ಇತರ ಸೌಲಭ್ಯಗಳನ್ನು ಪಡೆಯುವ ಅವಕಾಶವಿದೆ ಎಂಬ ಸಂಗತಿಯನ್ನು ಇಎಸ್‌ಎಸ್‌ಐಪಿ ಪ್ರಸ್ತಾಪಿಸಿದೆ.
ಈ ಯೋಜನೆಯ ಪ್ರಕಾರ ನೋಂದಾಯಿತ ನೌಕರರಿಗೆ ನಿರುದ್ಯೋಗ ಭತ್ಯೆ ನೀಡಲು ನೌಕರರ ರಾಜ್ಯ ವಿಮಾ ನಿಗಮ ನಿರ್ಧರಿಸಿದೆ.
ಕೆಲಸ ಕಳೆದುಕೊಂಡರೆ ನೌಕರರು ಎರಡು ವರ್ಷಗಳವರೆಗೂ ರಾಜೀವ್ ಗಾಂಧಿ ಶ್ರಮಿಕ್ ಕಲ್ಯಾಣ್ ಯೋಜನೆಯಡಿ ನಿರುದ್ಯೋಗ ಭತ್ಯೆಯನ್ನೂ ಪಡೆಯಬಹುದು.
ಕೋವಿಡ್ 19 ಸಾಂಕ್ರಾಮಿಕವು ಭಾರತವನ್ನು ಆರ್ಥಿಕ ಕುಸಿತಕ್ಕೆ ತಳ್ಳಿದ ಪರಿಣಾಮ ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಈ ಕಷ್ಟ ಕಾಲದಲ್ಲಿ ಪರಿಹಾರ ನೀಡಲು ರಾಜ್ಯ ವಿಮಾ ನಿಗಮ (ಇಎಸ್ಐಸಿ) ನಿರ್ಧರಿಸಿದೆ.
ʼಲಾಕ್ ಡೌನ್ʼ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಅಮೆರಿಕಾ ವೈದ್ಯ
ಕೋವಿಡ್ ಚಿಕಿತ್ಸೆಯ ಸಮಯದಲ್ಲಿ ನೌಕರನು 90 ದಿನ ಹಾಜರಿಲ್ಲದಿದ್ದರೂ ಸಹ ಆ ಪ್ರತಿ ದಿನದ ಶೇ.70ರಷ್ಟು ಸಂಬಳ ಪಡೆಯಬಹುದು.
ಅಟಲ್ ವಿಮೆ ಮಾಡಿಸಿದ ನೌಕರ ಮೂರು ತಿಂಗಳವರೆಗೆ ಹಣಕಾಸಿನ ನೆರವು ಪಡೆಯಬಹುದು. ನೌಕರರು ಇಎಸ್ಐಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅದರ ಲಾಭ ಪಡೆಯಬಹುದು.
ನೌಕರರ ರಾಜ್ಯ ವಿಮಾ ಯೋಜನೆಯು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಕಡಿಮೆ ಸಂಬಳ ಪಡೆಯುವ ನೌಕರರಿಗೆ ಭದ್ರತಾ ಯೋಜನೆಯಾಗಿದೆ.