alex Certify ಸಕಾಲಕ್ಕೆ ಬೆಡ್​ ಸಿಗದೆ ಆಸ್ಪತ್ರೆ ಆವರಣದಲ್ಲೇ ಪ್ರಾಣಬಿಟ್ಟ ಕೊರೊನಾ ಸೋಂಕಿತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಕಾಲಕ್ಕೆ ಬೆಡ್​ ಸಿಗದೆ ಆಸ್ಪತ್ರೆ ಆವರಣದಲ್ಲೇ ಪ್ರಾಣಬಿಟ್ಟ ಕೊರೊನಾ ಸೋಂಕಿತೆ..!

ದೇಶದಲ್ಲಿ ಕೊರೊನಾ ಎರಡನೆ ಅಲೆ ಜೋರಾಗಿರುವ ನಡುವೆಯೇ ವೈದ್ಯಕೀಯ ಸೌಲಭ್ಯಗಳಿಗೆ ಅಭಾವ ಉಂಟಾಗ್ತಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ನೋಯ್ಡಾದ ಕೊರೊನಾ ಸೋಂಕಿತ 35 ವರ್ಷದ ಮಹಿಳೆ ನೋಯ್ಡಾ ಆಸ್ಪತ್ರೆ ಎದುರಲ್ಲೇ ಜೀವಬಿಟ್ಟಿದ್ದಾರೆ. ನೋಯ್ಡಾದ ಜಿಮ್ಸ್ ಆಸ್ಪತ್ರೆ ಎದುರಲ್ಲಿ ಬೆಡ್​ ಸಿಗದೇ ಕಾರಿನಲ್ಲೇ ಒದ್ದಾಡುತ್ತಿದ್ದ ಮಹಿಳೆ ಜೀವ ಬಿಟ್ಟಿದ್ದಾರೆ. ಮೃತ ಮಹಿಳೆ ಗ್ರೇಟರ್​ ನೋಯ್ಡಾದಲ್ಲಿ ಇಂಜಿನಿಯರ್ ಆಗಿದ್ದರು.

ಇನ್ನು ಈ ವಿಚಾರವಾಗಿ ಮಾತನಾಡಿದ ಪ್ರತ್ಯಕ್ಷದರ್ಶಿ ಸಚಿನ್​, ನಾವು ಇದೆಲ್ಲವನ್ನ ನೋಡುತ್ತಾ ಅಲ್ಲೇ ನಿಂತಿದ್ದೆ. ಆಕೆ ಜೊತೆ ಇದ್ದವರು ಆಸ್ಪತ್ರೆಯ ಬಳಿ ಧಾವಿಸಿದ್ದರು. ಆದರೆ ಯಾರೂ ಸಹಾಯ ಮಾಡಿದಂತೆ ಕಾಣುತ್ತಿರಲಿಲ್ಲ. ಮಧ್ಯಾಹ್ನ 3.30ರ ಸುಮಾರಿಗೆ ಅವರು ಕುಸಿದು ಬಿದ್ದರು. ಕೂಡಲೇ ರಿಸಪ್ಶನಿಸ್ಟ್​ ಬಳಿ ಬಂದು ಆಕೆ ಉಸಿರಾಡುತ್ತಿಲ್ಲ ಎಂದು ಹೇಳುತ್ತಿದ್ದಂತೆಯೇ ಆಸ್ಪತ್ರೆ ಸಿಬ್ಬಂದಿ ಸೋಂಕಿತೆ ಬಳಿ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಸೋಂಕಿತೆ ಕಾರಿನಲ್ಲಿ ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ.

ದೇಶದಲ್ಲಿ ಕೊರೊನಾ ಗಂಭೀರ ಸ್ವರೂಪ ತಾಳುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಕಳೆದ ವಾರವಷ್ಟೇ ರಾಜ್ಯದಲ್ಲಿ ಆಕ್ಸಿಜನ್​ ಪೂರೈಕೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಆದರೆ ಉತ್ತರ ಪ್ರದೇಶದ ನೋಯ್ಡಾದ ಹಲವು ಕಡೆ ಸೋಂಕಿತರಿಗೆ ಬೆಡ್​ ಸೌಕರ್ಯ ಸಿಗುತ್ತಿಲ್ಲ. ಆಕ್ಸಿಜನ್​ ಅಭಾವ ಕೂಡ ಉಂಟಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...