ಬೆಂಗಳೂರು: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2020 -21 ನೇ ಸಾಲಿನಲ್ಲಿ ಆಹಾರಧಾನ್ಯಗಳ ರೀತಿಯಲ್ಲಿ ಹೊಸ ದಾಖಲೆ ಸೃಷ್ಟಿಯಾಗ್ತಿದೆ.
ಭತ್ತ, ರಾಗಿ, ಜೋಳವನ್ನು ಗರಿಷ್ಠ ಪ್ರಮಾಣದಲ್ಲಿ ಖರೀದಿಸಲಾಗುವುದು ಎಂದು ಆಹಾರ ಸಚಿವ ಉಮೇಶ ಕತ್ತಿ ಮಾಹಿತಿ ನೀಡಿದ್ದಾರೆ.
ಆರ್ಥಿಕವಾಗಿ ರೈತರಿಗೆ ಅನುಕೂಲ ಕಲ್ಪಿಸಲು ಮತ್ತು ಪಡಿತರ ಫಲಾನುಭವಿಗಳ ಪೌಷ್ಟಿಕತೆಯ ಪ್ರಮಾಣ ಕಡಿತಗೊಳಿಸಲು ರಾಗಿ, ಜೋಳ ವಿತರಿಸಲಾಗುವುದು. ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಕೃಷಿ ಉತ್ಪನ್ನಗಳನ್ನು ರಾಜ್ಯದ ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ವಿತರಿಸುವ ಷರತ್ತು ವಿಧಿಸಿದೆ.
ಸ್ಥಳೀಯ ಆಹಾರ ಪದ್ಧತಿಯಂತೆ ಪಡಿತರ ವ್ಯವಸ್ಥೆಯಡಿ ಆಹಾರಧಾನ್ಯಗಳ ವಿತರಣೆಯಿಂದ ಅನುಕೂಲವಾಗುತ್ತದೆ. ಪೌಷ್ಟಿಕತೆ ವೃದ್ಧಿಯಾಗಲಿದ್ದು, ಕಾಳಸಂತೆಯಲ್ಲಿ ಅಕ್ಕಿ ಮತ್ತು ಗೋಧಿ ಮಾರಾಟ ತಡೆಯಬಹುದು, ಜಾನುವಾರುಗಳಿಗೆ ಮೇವು ಕೊರತೆ ನಿವಾರಿಸಬಹುದು. ರಾಜ್ಯವು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಭತ್ತ, ರಾಗಿ ಜೋಳದ ಪ್ರಮಾಣ ಕಡಿತಗೊಳಿಸಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಕೇಂದ್ರ ಆಹಾರ ಧಾನ್ಯ ಹಂಚಿಕೆ ಮಾಡಲಿದೆ ಎನ್ನಲಾಗಿದೆ.