alex Certify ದೇಶದಲ್ಲಿ 100ಕ್ಕೂ ಹೆಚ್ಚು ಪತ್ರಕರ್ತರು ಕೊರೊನಾಗೆ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದಲ್ಲಿ 100ಕ್ಕೂ ಹೆಚ್ಚು ಪತ್ರಕರ್ತರು ಕೊರೊನಾಗೆ ಬಲಿ

ಡೆಡ್ಲಿ ವೈರಸ್​ನಿಂದಾಗಿ ಭಾರತ ನಲುಗಿ ಹೋಗಿದೆ. ದೇಶದಲ್ಲಿ ನಿತ್ಯ ಸರಾಸರಿ ಮೂರು ಲಕ್ಷಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗುತ್ತಿದೆ. ಅದರಲ್ಲೂ ಏಪ್ರಿಲ್​ ತಿಂಗಳಲ್ಲಿ ದೇಶ ಕಂಡು ಕಾಣರಿಯದಷ್ಟರ ಮಟ್ಟಿಗೆ ಕೊರೊನಾ ಸಾವು ನೋವುಗಳನ್ನ ವರದಿ ಮಾಡ್ತಿದೆ. ಈ ಕೊರೊನಾ ಎರಡನೇ ಅಲೆ ದೇಶದ ಪತ್ರಕರ್ತರನ್ನೂ ಬಿಟ್ಟಂತೆ ಕಾಣುತ್ತಿಲ್ಲ.

ದೇಶದಲ್ಲಿ ಕಳೆದ 28 ದಿನಗಳಲ್ಲಿ ಬರೋಬ್ಬರಿ 52 ಪತ್ರಕರ್ತರು ಕೊರೊನಾದಿಂದಾಗಿ ಜೀವ ಚೆಲ್ಲಿದ್ದಾರೆ..! ದೆಹಲಿ ಮೂಲಕ ವಿಶ್ವವಿದ್ಯಾಲಯವೊಂದು ನಡೆಸಿದ ಅಧ್ಯಯನದ ಪ್ರಕಾರ ಕಳೆದ ವರ್ಷ ಏಪ್ರಿಲ್​ 1ರಿಂದ ಈ ವರ್ಷ ಏಪ್ರಿಲ್​ 28ರವರೆಗೆ ದೇಶದಲ್ಲಿ ಒಟ್ಟು 101 ಮಂದಿ ಪತ್ರಕರ್ತರು ಕೊರೊನಾದಿಂದ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

ಕೊರೊನಾ ಲಸಿಕೆ ತೆಗೆದುಕೊಂಡ ನಂತ್ರ ಈ ಲಕ್ಷಣ ಕಂಡು ಬಂದ್ರೆ ಏನರ್ಥ ಗೊತ್ತಾ…..?

ದೆಹಲಿಯಲ್ಲಿ 56 ಮಂದಿ ಪತ್ರಕರ್ತರು ಕಳೆದ ನಾಲ್ಕು ತಿಂಗಳಲ್ಲಿ ಸಾವನ್ನಪ್ಪಿದ್ದಾರೆ. ಜನವರಿ 1ರಿಂದ ಏಪ್ರಿಲ್​ 28ರ ಒಳಗಾಗಿ 52 ಪತ್ರಕರ್ತರು ಕೇವಲ ಏಪ್ರಿಲ್​ ತಿಂಗಳಲ್ಲೇ ಸಾವನ್ನಪ್ಪಿದ್ದಾರೆ. ಅಂದರೆ ಸರಾಸರಿ ಈ ತಿಂಗಳಲ್ಲಿ ದಿನಕ್ಕೆ 2 ಪತ್ರಕರ್ತರು ಸಾವಿಗೀಡಾದಂತಾಗಿದೆ.

ಕೇವಲ ಏಪ್ರಿಲ್​ ತಿಂಗಳೊಂದರಲ್ಲೇ ದೇಶದಲ್ಲಿ 101 ಮಂದಿ ಪತ್ರಕರ್ತರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಇದರಲ್ಲಿ 52 ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಅತೀ ಹೆಚ್ಚು ಪತ್ರಕರ್ತರ ಸಾವನ್ನ ಕಂಡ ರಾಜ್ಯ ಉತ್ತರ ಪ್ರದೇಶವಾಗಿದೆ. ಇಲ್ಲಿ 19 ಮಂದಿ ಪತ್ರಕರ್ತರು ಮೃತಪಟ್ಟಿದ್ದಾರೆ. ಇನ್ನುಳಿದಂತೆ ತೆಲಂಗಾಣ 17 ಹಾಗೂ ಮಹಾರಾಷ್ಟ್ರದಲ್ಲಿ 13 ಮಂದಿ ಕೊರೊನಾದಿಂದ ಪ್ರಾಣ ಬಿಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...