alex Certify 4 ಕಿ.ಮೀ. ದೂರ ಸಾಗಲು 10 ಸಾವಿರ ರೂ. ಬಿಲ್: ಆಂಬುಲೆನ್ಸ್​ ಮಾಲೀಕನ ವಿರುದ್ದ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

4 ಕಿ.ಮೀ. ದೂರ ಸಾಗಲು 10 ಸಾವಿರ ರೂ. ಬಿಲ್: ಆಂಬುಲೆನ್ಸ್​ ಮಾಲೀಕನ ವಿರುದ್ದ ಆಕ್ರೋಶ

ಡೆಡ್ಲಿ ವೈರಸ್​​ನಿಂದ ಪರಿತಪಿಸುತ್ತಿರುವ ಜನರ ಪ್ರಾಣವನ್ನ ಕಾಪಾಡಲು ಇಡೀ ವೈದ್ಯ ಲೋಕವೇ ಶ್ರಮಿಸುತ್ತಿದೆ . ಈ ನಡುವೆ ಆಂಬುಲೆನ್ಸ್, ಆಕ್ಸಿಜನ್​ ಸಿಲಿಂಡರ್​ ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯಗಳ ಕೊರತೆ ಉಂಟಾಗ್ತಿದೆ. ಈ ಕಠಿಣ ಸಂದರ್ಭದಲ್ಲಿ ಅನೇಕರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರೆ ಇನ್ನೂ ಹಲವರು ಇದೇ ಪರಿಸ್ಥಿತಿಯ ಲಾಭವನ್ನ ಪಡೆಯುತ್ತಿದ್ದಾರೆ.

ಈ ಮಾತಿಗೆ ಸಾಕ್ಷಿ ಎಂಬಂತೆ ಗಂಭೀರ ಲಕ್ಷಣವನ್ನ ಹೊಂದಿರುವ ಕೋವಿಡ್​ ರೋಗಿಯನ್ನ ಆಂಬುಲೆನ್ಸ್​ನಲ್ಲಿ ನಾಲ್ಕು ಕಿಲೋಮೀಟರ್​​ ದೂರ ಸಾಗಿಸಲು 10 ಸಾವಿರ ರೂಪಾಯಿ ಬಿಲ್​ ಮಾಡಲಾಗಿದೆ. ಮಾನವೀಯ ಮೌಲ್ಯವನ್ನೇ ಕಳೆದುಕೊಂಡ ಕೆಲ ಆಂಬುಲೆನ್ಸ್ ಚಾಲಕರಿಂದಾಗಿ ದೆಹಲಿ ಜನತೆ ಪರಿತಪಿಸುವಂತಾಗಿದೆ.

ಗಮನಿಸಿ: ನಾಳೆಯಿಂದ ಬದಲಾಗಲಿದೆ ಈ ಎಲ್ಲ ನಿಯಮ

ಡಿ.ಕೆ. ಆಂಬುಲೆನ್ಸ್ ಸರ್ವೀಸ್​​​ ಗೆ ಸೇರಿದ 10 ಸಾವಿರ ರೂಪಾಯಿಗಳ ರಶೀದಿಯ ಫೋಟೋವನ್ನ ಐಪಿಎಸ್​ ಅಧಿಕಾರಿ ಅರುಣ್​ ಬೋಥ್ರಾ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ದೆಹಲಿಯಲ್ಲಿ ಕೇವಲ ನಾಲ್ಕು ಕಿಲೋಮೀಟರ್​ ದೂರಕ್ಕೆ 10 ಸಾವಿರ ರೂಪಾಯಿಯನ್ನ ಪಡೆಯಲಾಗಿದೆ. ಇಡೀ ವಿಶ್ವವೇ ಇಂದು ನಮ್ಮನ್ನ ನೋಡುತ್ತಿದೆ ಎಂದು ಶೀರ್ಷಿಕೆ ನೀಡಿದ್ದಾರೆ.

ಬೋಥ್ರಾರ ಟ್ವೀಟ್​​ 61 ಸಾವಿರಕ್ಕೂ ಹೆಚ್ಚು ಲೈಕ್​ ಹಾಗೂ 19 ಸಾವಿರ ರಿಟ್ವೀಟ್​ಗಳನ್ನ ಗಳಿಸಿದೆ. ಈ ಬಳಿಕ ಟ್ವೀಟಿಗರೂ ಸಹ ಈ ರೀತಿಯ ಅನೇಕ ಘಟನೆಗಳನ್ನ ಶೇರ್​ ಮಾಡಿದ್ದಾರೆ.

— Arun Bothra 🇮🇳 (@arunbothra) April 28, 2021

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...