ಕೊರೊನಾ ಲಸಿಕೆಯನ್ನ ಪಡೆದ ಮಾತ್ರಕ್ಕೆ ನೀವು ಸೋಂಕಿನಿಂದ ಸಂಪೂರ್ಣವಾಗಿ ಪಾರಾಗಿದ್ದೀರಾ ಎಂಬರ್ಥವಲ್ಲ. ಆದರೆ ಕೊರೊನಾ ಸೋಂಕಿನಿಂದ ಉಂಟಾಗಬಲ್ಲ ಗಂಭೀರ ಲಕ್ಷಣದಿಂದ ನಿಮ್ಮನ್ನ ಪಾರು ಮಾಡುವ ಶಕ್ತಿ ಲಸಿಕೆಗಳಿಗೆ ಇದೆ ಎಂಬ ವಿಚಾರ ಈಗಾಗಲೇ ಹಲವಾರು ಅಧ್ಯಯನ ಹಾಗೂ ಸಮೀಕ್ಷೆಗಳಲ್ಲಿ ಸಾಬೀತಾಗಿದೆ.
ಒಂದು ವೇಳೆ ಕೊರೊನಾ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದ ಬಳಿಕ ಸೋಂಕು ತಗುಲಿದ್ರೆ ಎರಡನೇ ಡೋಸ್ ಯಾವಾಗ ತೆಗೆದುಕೊಳ್ಳಬೇಕು ಎಂಬ ಗೊಂದಲ ಅನೇಕರಲ್ಲಿದೆ. ಇದು ವ್ಯಕ್ತಿಯು ಕೊರೊನಾದಿಂದ ಗುಣಮುಖರಾಗಿ ಬಂದ ಬಳಿಕ ಆತನ ದೇಹದಲ್ಲಿರುವ ಆಂಟಿ ಬಾಡಿ ಪ್ರಮಾಣದ ಮೇಲೆ ಅವಲಂಬಿಸಿರುತ್ತದೆ. ಎರಡನೆ ಡೋಸ್ ಯಾವಾಗ ತೆಗೆದುಕೊಳ್ಳಬೇಕು ಅನ್ನೋದಕ್ಕೆ ಇದು ಸಹಾಯ ಮಾಡುತ್ತದೆ.
ಕೊರೊನಾಗೂ ಪ್ರತಿಕಾಯಗಳಿಗೂ ಸಂಬಂಧವಿದೆ. ಸಾಮಾನ್ಯವಾಗಿ ಜನರು ಕೋವಿಡ್ 19ಗೆ ಒಳಗಾದ ವೇಳೆ ಪ್ರತಿಕಾಯ ಮಟ್ಟ 10 – 15 ಇರುತ್ತದೆ. ಈ ಮಟ್ಟ ಹೆಚ್ಚಾದರೆ ಲಸಿಕೆ ತೆಗೆದುಕೊಳ್ಳೋದು ಹೆಚ್ಚು ಸೂಕ್ತವಲ್ಲ ಎಂದು ವೈದ್ಯ ಅನೂಪ್ ಹೇಳಿದ್ದಾರೆ.
ಕೊರೋನಾ ಸೋಂಕಿತರ ರಕ್ಷಣೆಗೆ ‘ಸಂಜೀವಿನಿ’ ಸಿದ್ಧ: 162 ಆಕ್ಸಿಜನ್ ಉತ್ಪಾದನಾ ಘಟಕ, 1 ಲಕ್ಷ ಸಿಲಿಂಡರ್ ಖರೀದಿ
ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ಇಂಟರ್ವೆನ್ಶನಲ್ ಪಲ್ಮನಾಲಜಿ ಕನ್ಸಲ್ಟೆಂಟ್ ಡಾ. ಶ್ರೀವತ್ಸ ಲೋಕೇಶ್ವರನ್ ಹೇಳುವಂತೆ, ಕೊರೊನಾ ಮೊದಲ ಡೋಸ್ ಪಡೆದುಕೊಂಡ ಬಳಿಕ ವ್ಯಕ್ತಿಯು ಕೊರೊನಾ ಸೋಂಕಿಗೆ ಒಳಗಾದಲ್ಲಿ ಆತ ಎರಡನೇ ಡೋಸ್ ತೆಗೆದುಕೊಳ್ಳಲು 1.5 ತಿಂಗಳು ಕಾಲಾವಕಾಶ ತೆಗೆದುಕೊಳ್ಳೋದು ಒಳ್ಳೆಯದು ಎಂದಿದ್ದಾರೆ. ಅಲ್ಲದೇ ಎರಡನೇ ಡೋಸ್ಗಳನ್ನ ಪಡೆಯುವ ಮುನ್ನ ವೈದ್ಯರನ್ನ ಒಮ್ಮೆ ಸಂಪರ್ಕ ಮಾಡೋದು ಇನ್ನೂ ಉತ್ತಮ ಎಂದು ವೈದ್ಯರು ಹೇಳಿದ್ದಾರೆ.
ಇನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ, ಕೋವಿಡ್ 19 ಸಕ್ರಿಯ ರೋಗ ಲಕ್ಷಣವನ್ನ ಹೊಂದಿರುವ ವ್ಯಕ್ತಿ ಪ್ಲಾಸ್ಮಾ ಚಿಕಿತ್ಸೆಗೆ ಒಳಗಾಗಿ ಚೇತರಿಕೆಯಾದ ಬಳಿಕ ಲಸಿಕೆ ಸ್ವೀಕಾರವನ್ನ 4-8 ವಾರ ಮುಂದೂಡೋದು ಸೂಕ್ತ ಎಂದು ಹೇಳಿದೆ.