ವೈನ್ ಹಳೆಯದಾಗ್ತಿದ್ದಂತೆ ಅದ್ರ ರುಚಿ ಕೂಡ ಹೆಚ್ಚಾಗುತ್ತದೆ. ಹಾಗೆ ಅದ್ರ ಬೆಲೆ ಕೂಡ ಹೆಚ್ಚಾಗುತ್ತದೆ. ವಿಶ್ವದಲ್ಲಿ ದುಬಾರಿ ಬೆಲೆಯ ಸಾಕಷ್ಟು ಮದ್ಯಗಳಿವೆ. ಒಂದು ಬಾಟಲ್ ವಿಸ್ಕಿ ಬೆಲೆ ಒಂದು ಫ್ಲಾಟ್ ಬೆಲೆಗಿಂತ ಹೆಚ್ಚಿರುತ್ತದೆ. ನೀವೂ ಈ ದುಬಾರಿ ಬೆಲೆ ವಿಸ್ಕಿ ಖರೀದಿಸಲು ಆಸಕ್ತಿ ಹೊಂದಿದ್ದರೆ ಹರಾಜಿನಲ್ಲಿ ಪಾಲ್ಗೊಳ್ಳಬಹುದು.
ಅಮೆರಿಕಾದ ಮ್ಯಾಸಚೂಸೆಟ್ಸ್ ನ ಬೋಸ್ಟನ್ ನಲ್ಲಿ ದುಬಾರಿ ಬೆಲೆಯ ವಿಸ್ಕಿ ಹರಾಜು ನಡೆಯುತ್ತಿದೆ. ಹಳೆಯ ವಿಸ್ಕಿ ಹರಾಜು ಜೂನ್ 22ರಿಂದ 30ರವರೆಗೆ ನಡೆಯಲಿದೆ. ವರದಿ ಪ್ರಕಾರ ಅದ್ರ ಬೆಲೆ 40,000 ಡಾಲರ್ ವರೆಗೆ ಹರಾಜಾಗಲಿದೆ. ಇದು ಐತಿಹಾಸಿಕ ಬೌರ್ಬನ್ ವಿಸ್ಕಿ ಎಂದು ಹರಾಜುಗಾರ ಸ್ಕಿನ್ನರ್ ಹೇಳುತ್ತಾರೆ. ಸದ್ಯ ಒಂದೇ ಬಾಟಲಿ ಉಳಿದಿದೆ. 1940 ರ ದಶಕದಲ್ಲಿ ಜೆಪಿ ಮೋರ್ಗಾನ್ ಅವರು ವಾಷಿಂಗ್ಟನ್‌ನ ಪ್ರಬಲ ವ್ಯಕ್ತಿಗೆ ಇದನ್ನು ಉಡುಗೊರೆಯಾಗಿ ನೀಡಿದ್ದರಂತೆ.
ಗ್ಲ್ಯಾಸ್ಗೋ ವಿಶ್ವವಿದ್ಯಾಲಯದ ಮೌಲ್ಯಮಾಪನದ ಪ್ರಕಾರ, ಇದನ್ನು 1763 ಮತ್ತು 1803 ರ ನಡುವೆ ತಯಾರಿಸಲಾಗಿದೆ. ಈ ವೈನ್ ಬಾಟಲ್ 1770 ರ ದಶಕದಲ್ಲಿ ಭುಗಿಲೆದ್ದ ಐತಿಹಾಸಿಕ ಕ್ರಾಂತಿಕಾರಿ ಯುದ್ಧ ಮತ್ತು 1790 ರ ಸುಮಾರಿಗೆ ಪ್ರಾರಂಭವಾದ ವಿಸ್ಕಿ ದಂಗೆಯ ಒಂದು ಭಾಗವಾಗಿದೆ.
ವಿಶ್ವದ ಅತ್ಯಂತ ದುಬಾರಿ ವಿಸ್ಕಿಯ ಬೆಲೆಯ ಬಗ್ಗೆ ಮಾತನಾಡುವುದಾದ್ರೆ ಇದರ ಬೆಲೆ 15 ಕೋಟಿ 39 ಲಕ್ಷ ರೂಪಾಯಿ. ಇದನ್ನು 2019 ರಲ್ಲಿ ಲಂಡನ್‌ನಲ್ಲಿ ನಡೆದ ಮಾರಾಟದಲ್ಲಿ ಹರಾಜು ಮಾಡಲಾಯಿತು.