ನವದೆಹಲಿ: ದೇಶದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಶಾಲೆಗಳ ನೋಂದಣಿ ಮತ್ತು ನವೀಕರಣಕ್ಕೆ ಗಡುವು ವಿಸ್ತರಣೆ ಮಾಡಲಾಗಿದೆ.
ಜೂನ್ 30 ರವರೆಗೆ ಶಾಲಾ ಪ್ರವೇಶಾತಿ ದಾಖಲಾತಿಗೆ ಅವಕಾಶ ನೀಡಲಾಗಿದೆ. ಸಿಬಿಎಸ್ಇ ಸ್ಕೂಲ್ ಅಫಿಲಿಯೇಶನ್ ರೀ-ಎಂಜಿನಿಯರಿಂಗ್ ಆಟೊಮೇಷನ್ ಸಿಸ್ಟಮ್(ಸಾರಾಸ್) ಅಡಿಯಲ್ಲಿ ಹೊಸ ನೋಂದಣಿ, ನವೀಕರಣ ಮತ್ತು ವಿಸ್ತರಣೆಯ ಗಡುವನ್ನು ವಿಸ್ತರಿಸಿದೆ.
ಚಾಲ್ತಿಯಲ್ಲಿರುವ ಕೋವಿಡ್ -19 ಪರಿಸ್ಥಿತಿಯಿಂದಾಗಿ ಗಡುವು ವಿಸ್ತರಿಸಲು ಸಿಬಿಎಸ್‌ಇ ಮಂಡಳಿ ನಿರ್ಧರಿಸಿದೆ. SARAS ಎಂದು ಕರೆಯಲ್ಪಡುವ ಸಿಬಿಎಸ್‌ಇಯ ಹೊಸ ಅಂಗಸಂಸ್ಥೆ ವ್ಯವಸ್ಥೆಯು ಮಾರ್ಚ್ 1, 2021 ರಿಂದ ಜಾರಿಗೆ ಬಂದಿದೆ. ಆದಾಗ್ಯೂ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ), 2020 ಅನ್ನು ನಿರ್ವಹಿಸಲು ಮಂಡಳಿಯು ಅಂಗಸಂಸ್ಥೆ ವ್ಯವಸ್ಥೆಯನ್ನು ಪುನರ್ರಚಿಸಿದೆ.