ಕೊರೋನಾ ಸೋಂಕಿತರ ಸಂಖ್ಯೆ ತೀವ್ರ ಏರಿಕೆಯಾಗಿ ವೈದ್ಯಕೀಯ ಸೌಲಭ್ಯ ಕೊರತೆ ಕಂಡುಬಂದಿದೆ. ಇದೇ ಸಂದರ್ಭದಲ್ಲಿ ವೈದ್ಯಕೀಯ ಪರಿಕರಗಳ ಬೆಲೆ ದಿಢೀರ್ ಏರಿಕೆಯಾಗಿದೆ.
ಆಕ್ಸಿಮೀಟರ್, ಸ್ವೀಮರ್, ಥರ್ಮಾಮೀಟರ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ವೈದ್ಯಕೀಯ ಪರಿಕರಗಳ ದರ ಏರಿಕೆಯಾಗಿರುವುದು ಸೋಂಕಿತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೊರೊನಾ ಸೋಂಕು ತಗುಲಿದ ಎಲ್ಲರೂ ಆಸ್ಪತ್ರೆಗೆ ದಾಖಲಾಗಬೇಕಿಲ್ಲ, ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಲಾಗಿದೆ.
ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರಿಗೆ ಅಗತ್ಯ ವೈದ್ಯಕೀಯ ಪರಿಕರ, ಮಾತ್ರೆ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ. ಅಗತ್ಯವಾದ ವೈದ್ಯಕೀಯ ಪರಿಕರಗಳ ಬೆಲೆ ಹೆಚ್ಚಾಗಿದೆ. 900 -1000 ರೂಪಾಯಿಗೆ ಸಿಗುತ್ತಿದ್ದ ಆಕ್ಸಿಮೀಟರ್ ದರ 2 ರಿಂದ 3 ಸಾವಿರ ರೂಪಾಯಿಗೆ ಏರಿಕೆಯಾಗಿದೆ. 250 ಇದ್ದ ಸ್ವೀಮರ್ ದರ 500 ರೂ.ಗೆ ಏರಿಕೆಯಾಗಿದೆ. ಡಿಜಿಟಲ್ ಥರ್ಮಾಮೀಟರ್ 250 ರಿಂದ 400 ರೂಪಾಯಿಗೆ ಏರಿಕೆಯಾಗಿದೆ.