alex Certify ಬೆರಗಾಗಿಸುತ್ತೆ ವೃದ್ದನ ಕಾರ್‌ ಪಾರ್ಕಿಂಗ್‌ ಕೌಶಲ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ವೃದ್ದನ ಕಾರ್‌ ಪಾರ್ಕಿಂಗ್‌ ಕೌಶಲ್ಯ….!

ನಗರೀಕರಣ ಹೆಚ್ಚಾಗುತ್ತಿದ್ದಂತೆ ವಾಹನಗಳ ಪಾರ್ಕಿಂಗ್ ಸಮಸ್ಯೆ ಕೂಡ ವ್ಯಾಪಕವಾಗುತ್ತಿದೆ. ವಾಹನ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ವಾಹನ ಕೊಳ್ಳುವ ಆಸೆ ಇದ್ದವರು ತಮ್ಮ‌ ಆಸೆ ಬದಿಗಿಡುವ ಉದಾಹರಣೆ ನಮ್ಮ ಮಧ್ಯೆ ಸಿಗಬಹುದು.

ಆದರೆ ಈ ಜಾಗತಿಕ ಸಮಸ್ಯೆಗೆ ತಮ್ಮದೇ ಪರಿಹಾರ ಕಂಡುಕೊಂಡವರು ಸಾಕಷ್ಟಿದ್ದಾರೆ. ಇದೀಗ ಅಂತರ್ಜಾಲದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಇರುವ ಅತಿ ಸಣ್ಣ ಜಾಗದಲ್ಲಿ ಕಾರು ಪಾರ್ಕಿಂಗ್ ಮಾಡಿ ವ್ಯಕ್ತಿಯೊಬ್ಬರು ಸುದ್ದಿಯಾಗಿದ್ದಾರೆ.

ಅಂದಹಾಗೆ ಈ ಕ್ಲಿಪ್ 10 ವರ್ಷ ಹಳೆಯದು. ಯುಜೀನ್ ಎಂಬ ಡಚ್ ಕಾರು ಚಾಲಕನಿಗೆ ಆಗ 88 ವರ್ಷ ವಯಸ್ಸಾಗಿದ್ದು, 2016 ರಲ್ಲಿ ಆತ ನಿಧನರಾದರು.

ಚಾಲಕನು ತನ್ನ ಕಾರ್‌ಗಿಂತ ಕೇವಲ 6 ಸೆಂ.ಮೀ. ಅಗಲದ ಗ್ಯಾರೇಜ್‌ನಲ್ಲಿ ನಿಲುಗಡೆ ಮಾಡುವ ಈ ವಿಡಿಯೋ ಕ್ಲಿಪ್ ನೆಟ್ಟಿಗರನ್ನು ಅಚ್ಚರಿಗೆ ದೂಡಿದೆ.

ಕೊರೊನಾ ವಿರುದ್ಧ ಹೋರಾಡಿ ಗೆದ್ದ 105 ವರ್ಷದ ಪತಿ, 95 ವರ್ಷದ ಪತ್ನಿ….!

ಯುಜೀನ್ ತನ್ನ ಫಿಯೆಟ್ ಪಾಂಡಾವನ್ನು ತನ್ನ ಗ್ಯಾರೇಜ್‌ನಲ್ಲಿ ನಿಲ್ಲಿಸಿರುವುದನ್ನು ತೋರಿಸುತ್ತಾನೆ. ಆತನ ಕಾರು 1.49 ಮೀಟರ್ ಅಗಲವಿದ್ದರೆ ಗ್ಯಾರೇಜ್ 1.55 ಮೀಟರ್ ಅಗಲವಿದೆ. ಅಂದರೆ ತನ್ನ ಕಾರ್‌ಗಿಂತ ಕೇವಲ 6 ಸೆಂ.ಮೀ. ಅಗಲದ ಗ್ಯಾರೇಜ್‌ನಲ್ಲಿ ಆತ ಪಾರ್ಕಿಂಗ್ ಮಾಡುವುದೇ ವಿಶೇಷ.

ಅತ್ಯಂತ ನುರಿತ ಚಾಲಕರು ಸಹ ತಮ್ಮ ಕಾರನ್ನು ಕಿರಿದಾದ ಸ್ಥಳದಲ್ಲಿ ನಿಲ್ಲಿಸುವುದು ಕಷ್ಟ. ವರ್ಷಗಳ ಅಭ್ಯಾಸ ಮತ್ತು ಅನುಭವದಿಂದ ಮಾತ್ರ ಇದು ಸಾಧ್ಯವಾಗಬಹುದೇನೋ?

ಗ್ಯಾರೇಜ್ ‌ನ ಗೋಡೆಗಳು ಸ್ಪಂಜುಗಳನ್ನು ಹೊಂದಿವೆ. ಕಾರು ಗೋಡೆಗೆ ತಾಗಬಹುದಾದ ಸಂಭವನೀಯತೆ ಇರುವ ಕಾರಣ ಮುನ್ನೆಚ್ಚರಿಕೆ ವಹಿಸಲಾಗಿದೆ. ಜತೆಗೆ ಕಾರಿನ ‌ಡೋರ್ ತೆಗೆದು ಮನೆಯೊಳಗೆ ಕಾಲಿಟ್ಟು ಆ ಕ್ಷಣವೇ ಕಾರಿನ ಡೋರ್ ಕ್ಲೋಸ್ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...