alex Certify ಮದುವೆ ಮನೆಗೆ ನುಗ್ಗಿ ಐಎಎಸ್​ ಅಧಿಕಾರಿ ದುರ್ವರ್ತನೆ: ನೆಟ್ಟಿಗರಿಂದ ತೀವ್ರ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮನೆಗೆ ನುಗ್ಗಿ ಐಎಎಸ್​ ಅಧಿಕಾರಿ ದುರ್ವರ್ತನೆ: ನೆಟ್ಟಿಗರಿಂದ ತೀವ್ರ ಆಕ್ರೋಶ

ಅಗರ್ತಾಲಾ ಜಿಲ್ಲಾ ಮ್ಯಾಜಿಸ್ಟ್ರೇಟ್​​ ಶೈಲೇಶ್​ ಯಾದವ್​​ ಕೊರೊನಾ ಮಾರ್ಗಸೂಚಿಯ ಕಾರಣವನ್ನ ನೀಡಿ ಮದುವೆ ಮನೆಯ ಮೇಲೆ ದಾಳಿ ನಡೆಸಿದ್ದು ವಿಡಿಯೋ ಭಾರೀ ವೈರಲ್​ ಆಗಿದೆ. ದಾಳಿ ವೇಳೆ ಅಶ್ಲೀಲ ಪದ ಬಳಕೆ ಹಾಗೂ ಅತಿಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಅಡಿಯಲ್ಲಿ ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ವಿಡಿಯೋದಲ್ಲಿ ಯಾದವ್​​​ ಮದುವೆ ಮನೆಗೆ ಬಂದು ವಿವಾಹ ಕಾರ್ಯಕ್ರಮವನ್ನ ರದ್ದು ಮಾಡುವಂತೆ ಹೇಳಿದ್ದಾರೆ. ಅಲ್ಲದೇ ಕೊರೊನಾ ಮಾರ್ಗಸೂಚಿಯ ಉಲ್ಲಂಘನೆಯಾಗಿದ್ದು ಗಮನಕ್ಕೆ ಬಾರದ ಕಾರಣ ಸ್ಥಳೀಯ ಪೊಲೀಸರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ತನ್ನ ಸಮೀಪದಲ್ಲೇ ನಿಂತಿದ್ದ ಪೊಲೀಸ್​ ಅಧಿಕಾರಿ ಕಡೆ ನೋಡಿ ಮಾತನಾಡಿದ ಯಾದವ್​, ಇಲ್ಲಿರುವ ಎಲ್ಲರೂ ಸೆಕ್ಷನ್​​ 144ನ್ನು ಉಲ್ಲಂಘಿಸಿದ್ದಾರೆ. ಇವರೆಲ್ಲರನ್ನೂ ಈ ಕೂಡಲೇ ಬಂಧಿಸಲಾಗುವುದು. ಅಲ್ಲದೇ ಪಶ್ಚಿಮ ಅಗರ್ತಲಾ ಪೊಲೀಸ್​ ಠಾಣೆಯ ಒಸಿಯನ್ನ ಅಮಾನತು ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡೋದಾಗಿ ಹೇಳಿದ್ದಾರೆ.

ಆದರೆ ಐಎಎಸ್​ ಅಧಿಕಾರಿಯ ದುವರ್ತನೆ ಕೈಗಾರಿಕೋದ್ಯಮಿ ನವೀನ್​ ಜಿಂದಾಲ್​ ಸೇರಿದಂತೆ ಅನೇಕರನ್ನ ಕೆರಳಿಸಿದೆ. ಈ ವಿಚಾರವಾಗಿ ಟ್ವೀಟ್​ ಮಾಡಿರುವ ಜಿಂದಾಲ್​, ಇದೊಂದು ಐಎಎಸ್​ ಅಧಿಕಾರಿಯ ದುರ್ವರ್ತನೆಯ ಪರಮಾವಧಿಯಾಗಿದೆ. ಕೊರೊನಾ ಮಾರ್ಗಸೂಚಿಗಳನ್ನ ಪಾಲನೆ ಮಾಡಿರುವ ಬಗ್ಗೆ ಪರಿಶೀಲನೆ ಮಾಡಲಿ. ಆದರೆ ಜನರ ಮೇಲೆ ಹಲ್ಲೆ ನಡೆಸೋದು ಸರಿ ಅಲ್ಲ. ಈ ಅಧಿಕಾರಿಯ ವಿರುದ್ಧ ತ್ರಿಪುರ ಸಿಎಂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬರೆದಿದ್ದಾರೆ.

— Viक़as (@VlKAS_PR0NAM0) April 27, 2021

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...