ಭಾರತೀಯ ಅಂಚೆ ಇಲಾಖೆ ಬಿಹಾರ ಹಾಗೂ ಮಹಾರಾಷ್ಟ್ರಗಳಲ್ಲಿ ಖಾಲಿ ಇರುವ ಗ್ರಾಮೀಣ ಡಾಕ್ ಸೇವಕ್ ಹುದ್ದೆಯ 4368 ಸ್ಥಾನಗಳನ್ನ ಭರ್ತಿ ಮಾಡಲು ನಿರ್ಧರಿಸಿದೆ. ಈ ಹುದ್ದೆಗೆ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಮೇ 26 ಕೊನೆಯ ದಿನಾಂಕವಾಗಿದೆ. ಬಿಹಾರದಲ್ಲಿ 1940 ಹಾಗೂ ಮಹಾರಾಷ್ಟ್ರದಲ್ಲಿ 2428 ಹುದ್ದೆಗಳು ಖಾಲಿ ಇವೆ.
ಅಭ್ಯರ್ಥಿಗಳು ಆನ್ಲೈನ್ನಲ್ಲಿ ಸಲ್ಲಿಸಿದ ಅರ್ಜಿಯನ್ನ ಆಧರಿಸಿ ಆಟೋಮ್ಯಾಟಿಕ್ ಜನರೇಟೆಡ್ ಮೆರಿಟ್ ಲಿಸ್ಟ್ನ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅರ್ಹ ಶೈಕ್ಷಣಿಕ ಮಟ್ಟಕ್ಕಿಂತ ಹೆಚ್ಚಿನ ವ್ಯಾಸಂಗ ಮಾಡಿದವರಿಗೆ ವಿಶೇಷ ಆದ್ಯತೆ ನೀಡಲಾಗೋದಿಲ್ಲ. ಹತ್ತನೇ ತರಗತಿಯಲ್ಲಿ ಶಿಕ್ಷಣ ಇಲಾಖೆಯಿಂದ ಪಡೆದ ಅಂಕಗಳನ್ನ ಆಧರಿಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಸ್ಥಳೀಯ ಭಾಷೆಯಲ್ಲಿ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಟ 18 ಹಾಗೂ ಗರಿಷ್ಟ 40 ವರ್ಷ ವಯಸ್ಸಿನ ಮಿತಿ ಇಡಲಾಗಿದೆ.
ಗ್ರಾಮೀಣ ಡಾಕ್ ಸೇವಕರು ಒಂದು ದಿನದಲ್ಲಿ ನಾಲ್ಕರಿಂದ ಐದು ಗಂಟೆಗಳ ಕಾಲ ಕಾರ್ಯ ನಿರ್ವಹಿಸ್ತಾರೆ. ಇದೊಂದು ಅರೆಕಾಲಿಕ ಕೆಲಸವಾಗಿರೋದ್ರಿಂದ ಅಭ್ಯರ್ಥಿ ಜೀವನೋಪಾಯಕ್ಕೆ ಬೇರೆ ಮಾರ್ಗಗಳನ್ನೂ ಕಂಡುಕೊಳ್ಳಬಹುದಾಗಿದೆ ಎಂದು ಭಾರತೀಯ ಅಂಚೆ ಇಲಾಖೆ ಹೇಳಿದೆ.
ಅರ್ಜಿ ಸಲ್ಲಿಕೆ ವಿಚಾರವಾಗಿ ಫ್ರಾಡ್ ಕರೆ ಹಾಗೂ ಮೆಸೇಜ್ಗಳಿಂದ ಎಚ್ಚರದಿಂದ ಇರುವಂತೆ ಭಾರತೀಯ ಅಂಚೆ ಇಲಾಖೆ ಅಭ್ಯರ್ಥಿಗಳನ್ನ ಎಚ್ಚರಿಸಿದೆ. ಹುದ್ದೆ ವಿಚಾರವಾಗಿ ಭಾರತೀಯ ಅಂಚೆ ಇಲಾಖೆ ಯಾವುದೇ ಅಭ್ಯರ್ಥಿಗೆ ಕರೆ ಮಾಡೋದಿಲ್ಲ. ಹೀಗಾಗಿ ಯಾವುದೇ ಕರೆ ಬಂದರೂ ನಿಮ್ಮ ರಿಜಿಸ್ಟ್ರೇಷನ್ ಸಂಖ್ಯೆಯ ಬಗ್ಗೆ ಮಾಹಿತಿ ನೀಡಬೇಡಿ ಎಂದು ಎಚ್ಚರಿಕೆ ನೀಡಿದೆ.