ಕರ್ನಾಟಕದ ನದಿಗಳು ಎಂದ ಕೂಡಲೇ ಮೊದಲು ನೆನಪಾಗೋದೇ ಕಾವೇರಿ. ಇದೇ ಕಾವೇರಿ ನದಿಯ ತಟದಲ್ಲಿ ಗಾಳಿಬೋರ್ ಎಂಬ ಪ್ರಾಕೃತಿಕ ಶಿಬಿರವಿದ್ದು ನಿಸರ್ಗ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಈ ನಿಸರ್ಗ ರಮಣೀಯ ಸ್ಥಳವು ಬೆಂಗಳೂರಿನಿಂದ 110 ಕಿಲೋಮೀಟರ್ ದೂರದಲ್ಲಿದೆ.
ಇದು ಅರ್ಕಾವತಿ ಹಾಗೂ ಕಾವೇರಿ ನದಿಗಳ ಸಂಗಮವಾಗಿದೆ. ಈ ಶಿಬಿರದ ಹಿಂದೆ ಗಾಳಿಬೋರ್ ಎಂಬ ಹೆಸರಿನ ಬೆಟ್ಟವಿದೆ. ಇದೇ ಬೆಟ್ಟದ ಹೆಸರನ್ನ ಶಿಬಿರಕ್ಕೆ ಇಡಲಾಗಿದೆ. ಮೀನುಗಾರಿಕೆಗೆ ಇದೊಂದು ಬೆಸ್ಟ್ ಪ್ಲೇಸ್ ಆಗಿದ್ದು ಇಲ್ಲಿಗೆ ಬರುವ ಪ್ರವಾಸಿಗರೆಲ್ಲ ಗಾಳ ಹಾಕಿ ಮೀನು ಹಿಡಿಯುತ್ತಾರೆ. ಹೀಗಾಗಿ ಫಿಶ್ಶಿಂಗ್ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿದೆ.
ಟಿಎ – ಡಿಎ ಏರಿಕೆ ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರಿಗೊಂದು ಮುಖ್ಯ ಮಾಹಿತಿ
ಇಲ್ಲಿ ನಿಮಗೆ ಮಾರ್ಜಾಲ ಮೀನು, ಕಾರ್ಪ್, ಮಶೇರ್ ನಂತಹ ಅಪರೂಪದ ಮೀನುಗಳು ಕಾಣಸಿಗುತ್ತವೆ. ಮೀನುಗಳು ಮಾತ್ರವಲ್ಲದೇ 250ಕ್ಕೂ ಹೆಚ್ಚು ಬಗೆಯ ತರಹೇವಾರಿ ಪಕ್ಷಿಗಳನ್ನೂ ನೀವು ಕಣ್ತುಂಬಿಕೊಳ್ಳಬಹುದಾಗಿದೆ. ಮೀನು , ಪಕ್ಷಿಗಳ ಜೊತೆಯಲ್ಲಿ ನೀವು ಮಲಬಾರ್ ದೈತ್ಯ ಅಳಿಲು, ಆನೆ, ಚಿರತೆಯಂತಹ ಪ್ರಾಣಿಗಳನ್ನೂ ಕಾಣಬಹುದು.
ಪಕ್ಷಿ – ಪ್ರಾಣಿ ಪ್ರಿಯರು, ಚಾರಣ ಪ್ರಿಯರು ಜೂನ್ – ಆಗಸ್ಟ್ ತಿಂಗಳಲ್ಲಿ ಈ ಶಿಬಿರಕ್ಕೆ ಭೇಟಿ ನೀಡಬಹುದಾಗಿದೆ. ಫಿಶ್ಶಿಂಗ್ ಪ್ರಿಯರು ಏಪ್ರಿಲ್, ಮೇ ತಿಂಗಳಲ್ಲಿ ಭೇಟಿ ನೀಡೋದು ಹೆಚ್ಚು ಸೂಕ್ತವಾಗಿದೆ.