ರಾಜ್ಯದಲ್ಲಿ ಕೊರೊನಾ ವೈರಸ್ ತಾಂಡವವಾಡ್ತಿದೆ. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಡೆಡ್ಲಿ ವೈರಸ್ ಕಾಟ ಮಿತಿಮೀರಿದೆ. ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಲಾಕ್ಡೌನ್ ಹೇರಿದ್ದು ರಾಜ್ಯ ರಾಜಧಾನಿಯ ಬಹುತೇಕ ಮಂದಿ ಕಳೆದ ವರ್ಷದಂತೆಯೇ ಈ ವರ್ಷವೂ ಸಹ ತವರೂರಿಗೆ ವಾಪಸ್ಸಾಗ್ತಾ ಇದ್ದಾರೆ.
ಕೊರೊನಾ ಬಂದರೆ ವೈದ್ಯಕೀಯ ಸೌಲಭ್ಯ ಸಿಗದೇ ಹೋದರೆ ಎನ್ನುವ ಭಯ, ಲಾಕ್ಡೌನ್ನಿಂದಾಗಿ ಹೊಟ್ಟೆಪಾಡು ಹೇಗೆ ಎಂಬ ಆತಂಕ ಈ ಎಲ್ಲಾ ಕಾರಣಗಳಿಂದಾಗಿ ಬೆಂಗಳೂರಿನ ಬಹುತೇಕ ಮಂದಿ ಊರು ಖಾಲಿ ಮಾಡ್ತಿದ್ದಾರೆ. ಗಂಟು ಮೂಟೆ ಕಟ್ಟಿಕೊಂಡ ಜನರು ಖಾಸಗಿ ವಾಹನಗಳಲ್ಲಿ, ಗೂಡ್ಸ್ ಗಾಡಿಗಳ ಮೂಲಕ ಬೆಳಗ್ಗೆಯಿಂದಲೇ ಬೆಂಗಳೂರಿನಿಂದ ಜಾಗ ಖಾಲಿ ಮಾಡ್ತಿದ್ದಾರೆ.
ಕೊರೊನಾ ʼಲಸಿಕೆʼ ಹಾಕಿಸಿಕೊಳ್ಳಲು ಹೋಗುವ ಮುನ್ನ ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ
ಬೆಂಗಳೂರು ತ್ಯಜಿಸಿ ಹೊರಟವರಲ್ಲಿ ಬಹುತೇಕ ಕುಟುಂಬ ಟ್ಯಾಕ್ಸಿ ಸೇವೆ, ಬಾರ್, ಹೋಟೆಲ್ ಇವುಗಳನ್ನೇ ನಂಬಿಕೊಂಡಿದೆ. ಇವರೆಲ್ಲರೂ ರಾಜ್ಯ ರಾಜಧಾನಿ ಮತ್ತೆ ಮೊದಲಿನಂತೆಯೇ ಆದ ಬಳಿಕ ವಾಪಸ್ಸಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.