ಉದ್ಯೋಗಿಗಳ ಭವಿಷ್ಯ ನಿಧಿ ಆರ್ಥಿಕ ಸಂಕಷ್ಟದ ಸಮಯದಲ್ಲಿ ಸಹಾಯಕ್ಕೆ ಬರುವ ಅಸ್ತ್ರಗಳಲ್ಲಿ ಒಂದಾಗಿದೆ. ಉದ್ಯೋಗಿ ಹಾಗೂ ಉದ್ಯೋಗದಾತರ ಪಾಲಿನ ಹಣವನ್ನ ಹೊಂದಿರುವ ಪಿಎಫ್ ಮೊತ್ತ ನಿವೃತ್ತಿ ಬಳಿಕ ಅಥವಾ ಹಣದ ಅವಶ್ಯಕತೆ ಇದ್ದ ಸಮಯದಲ್ಲಿ ಪಡೆಯಬಹುದಾಗಿದೆ.
ನಿಮ್ಮ ಇಪಿಎಫ್ನಲ್ಲಿ ಎಷ್ಟು ಹಣವಿದೆ ಅನ್ನೋದನ್ನ ನೀವು ಇಪಿಎಫ್ಒ ಕಚೇರಿಯಲ್ಲಿ ಗೊತ್ತು ಮಾಡಿಕೊಳ್ಳಬಹುದು ಹಾಗೂ ಇದನ್ನ ಹೊರತುಪಡಿಸಿ ಇನ್ನೂ ಹಲವು ಮಾರ್ಗಗಳಿವೆ. ಆದರೆ ಕೊರೊನಾ ಪ್ರಕರಣ ಅತಿಯಾಗ್ತಿರೋದ್ರಿಂದ ಸ್ಮಾರ್ಟ್ ಮಾರ್ಗದ ಮೂಲಕವೇ ನೀವು ಪಿಎಫ್ ಮೊತ್ತವನ್ನ ಕಂಡುಕೊಳ್ಳಬಹುದಾಗಿದೆ.
1. ಎಸ್ಎಂಎಸ್ ಮೂಲಕ : ಎಸ್ಎಂಎಸ್ ಮೂಲಕ ನೀವು ಇಪಿಎಫ್ ಹಣವನ್ನ ಕಂಡುಹಿಡಿಯಬಹುದು. ಇದಕ್ಕಾಗಿ ನೀವು EPFOHO UAN LAN ನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7738299899ಕ್ಕೆ ಕಳುಹಿಸಿ.
2. ಮಿಸ್ಡ್ ಕಾಲ್ ಮೂಲಕ : ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಮೊಬೈಲ್ ನಂಬರ್ಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಬಹುದು.
3. ಆನ್ಲೈನ್ ಮೂಲಕ : ಇಪಿಎಫ್ಒ ವೆಬ್ಸೈಟ್ ನಲ್ಲಿ ಲಾಗಿನ್ ಆಗಿ ಬಳಿಕ ಡೌನ್ಲೋಡ್ ಪಾಸ್ಬುಕ್ ಆಯ್ಕೆ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಬಹುದು.
4. UMANG ಅಪ್ಲಿಕೇಶನ್ ಮೂಲಕ : ಇಪಿಎಫ್ಒನಲ್ಲಿ Employee centric services ಆಯ್ಕೆ ಕ್ಲಿಕ್ ಮಾಡಿ. ಇದರಲ್ಲಿ ವೀವ್ ಪಾಸ್ಬುಕ್ ಕ್ಲಿಕ್ ಮಾಡಿ. ಪಾಸ್ಬುಕ್ನ್ನು ನೋಡಲು ಯುಎಎನ್ ಮೂಲಕ ಲಾಗಿನ್ ಆಗಿ.